ಮಹಿಳೆಯರು, ಮಕ್ಕಳ ಮೆಲಿನ ಅಪರಾಧ 50ಸಾವಿರ ಮಂದಿ ಆರೋಪಮುಕ್ತ : 13,100 ಮಂದಿಗೆ ಮಾತ್ರ ಶಿಕ್ಷೆ

Contributed bycrastalp19@gmail.com|Vijaya Karnataka
over 50000 accused freed in crimes against women and children
ಕಾಸರಗೋಡು: ಹತ್ತು ವರ್ಷಗಳಲ್ಲಿಫೋಕ್ಸೋ ಪ್ರಕರಣಗಳಿಗೆ ಒಳಗಾದ ಮಕ್ಕಳ ಹಾಗೂ ಮಹಿಳೆಯರ ಸಂಖ್ಯೆ ಆತಂಕಪಡಿಸುವಂತಿದೆ.

1,95,441 ಮಕ್ಕಳು ಹಾಗೂ ಮಹಿಳೆಯರು ನಾನಾ ಪ್ರಕರಣಗಳ ಸಂತ್ರಸ್ತರಾಗಿದ್ದಾರೆ. ಆದರೆ ಆರೋಪಿ ಸ್ಥಾನದಲ್ಲಿದ್ದ ಅರ್ಧಕ್ಕೂ ಹೆಚ್ಚು ಮಂದಿಗೆ ಶಿಕ್ಷೆ ಲಭಿಸಿಲ್ಲ. 2016 ಮೇ 1ರಿಂದ 2026 ಏಪ್ರಿಲ್ 30ರ ವರೆಗಿನ ಹತ್ತು ವರ್ಷ ಮಹಿಳೆಯರ ವಿರುದ್ಧ ನಡೆದ 1,58406 ಅಪರಾಧಗಳು, ಫೋಕ್ಸೊ ಕಾನೂನು ಪ್ರಕಾರ 37,035 ಪ್ರಕರಣಗಳು ದಾಖಲಾಗಿವೆ. ಈ ಅಪರಾಧ ಪ್ರಕರಣಗಳಲ್ಲಿ 1261 ಮಂದಿ ಜೀವ ಕಳೆದುಕೊಂಡಿದ್ದಾರೆ. 918 ಮಹಿಳೆಯರು ಹಾಗೂ 343 ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಆದರೆ ಶಿಕ್ಷೆಗೊಳಗಾದವರು 13,100 ಆರೋಪಿಗಳು ಮಾತ್ರ. ಆರೋಪದಿಂದ ಮುಕ್ತರಾದವರು 47266 ಮಂದಿ.
ಈ ಪ್ರಕರಣಗಳಲ್ಲಿ ಹೆಚ್ಚಿನವುಗಳಿಗೆ ಸರಕಾರದ ಅಪೀಲು ಹೋಗಿಲ್ಲ ಎಂದು ಇಲಾಖೆಯ ಅಂಕಿಅಂಶಗಳು ವ್ಯಕ್ತಪಡಿಸುತ್ತವೆ. ಅಪರಾಧದಿಂದ ಮುಕ್ತರಾದವರಲ್ಲಿಮಹಿಳೆಯರ ಮೇಲಿರುವ ಪ್ರಕರಣಗಳಲ್ಲಿಆರೋಪಿತರಾದ 30,413 ಮಂದಿ, ಪೋಕ್ಸೋ ಪ್ರಕರಣದಲ್ಲಿಆರೋಪಿತರಾದ 16,853 ಮಂದಿ ಇದ್ದಾರೆ.