ಎಸ್ ಎಫ್ ಐ ಹೋರಾಟಕ್ಕೆ ಜನರ ಪ್ರಶಂಸೆ (ಹೆಡ್ )

Contributed byraghukgjd1@gmail.com|Vijaya Karnataka
sfi struggle in gadag students stand united and strong
ಗಜೇಂದ್ರಗಡ ತಾಲೂಕು ಎಸ್ ಎಫ್ ಐ ಸಮ್ಮೇಳನ (ಬಾಕ್ಸ್ )

ಎಸ್ ಎಫ್ ಐ ಹೋರಾಟಕ್ಕೆ ಜನರ ಪ್ರಶಂಸೆ (ಹೆಡ್ )
ವಿಕ ಸುದ್ದಿಲೋಕ ಗಜೇಂದ್ರಗಡ

ಪಟ್ಟಣದ ಎಸ್ ಎಫ್ ಐ ಕಚೇರಿಯಲ್ಲಿಮಂಗಳವಾರ ಗಜೇಂದ್ರಗಡ ತಾಲೂಕು ಎಸ್ ಎಫ್ ಐ ಸಮ್ಮೇಳನ ನಡೆಯಿತು.

ತಮಟೆ ಬಾರಿಸುವ ಮೂಲಕ ಸಮ್ಮೇಳನ ಉದ್ಘಾಟಿಸಿದ ಎಸ್ .ಎ ಪಿಯು ಕಾಲೇಜ ಪ್ರಾ.ವಸಂತರಾವ್ ಗಾರ್ಗಿ ಮಾತನಾಡಿ, ನಾಯಕತ್ವ ಗುಣ ಬೆಳೆಸುವುದು, ಶೈಕ್ಷಣಿಕ ಪ್ರಗತಿ, ಹಕ್ಕುಗಳ ರಕ್ಷಣೆ ಜತೆ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆಗೆ ಸಂಘಟನೆಯ ಹೋರಾಟ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಗಣೇಶ್ ರಾಥೋಡ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅನ್ಯಾಯ ಆದರೆ ಅದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿ ನ್ಯಾಯ ಕೊಡಿಸುವ ಕೆಲಸ ಸಂಘಟನೆ ಮಾಡುತ್ತಿದೆ. ತಾಲೂಕು ಮಟ್ಟದಲ್ಲಿಸಮ್ಮೇಳನ ಮೂಲಕ ಹೊಸ ನಾಯಕತ್ವ, ಪ್ರಜಾಸತ್ತಾತ್ಮಕ ಸಂಘಟನಾ ನಿಯಮ ಸಂಘಟನೆ ಅಳವಡಿಸಿಕೊಂಡಿದೆ ಎಂದು ಹೇಳಿದರು.

ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಬಾಲು ರಾಥೋಡ್ , ಪೀರು ರಾಥೋಡ್ , ಎಸ್ .ಎಸ್ .ದಿಂಡವಾಡ್ , ಅಕ್ಕಮ್ಮ ರಾಠೋಡ್ , ಚಂದ್ರು ರಾಥೋಡ್ ಮಾತನಾಡಿದರು. ಅನಿಲ್ .ಆರ್ ಅಧ್ಯಕ್ಷತೆ ವಹಿಸಿದ್ದರು.

ನಿರ್ಣಯಗಳು: ಅರ್ಜಿ ಹಾಕಿದ ಎಲ್ಲವಿದ್ಯಾರ್ಥಿಗಳಿಗೂ ಹಾಸ್ಟೆಲ್ , ಸ್ಕಾಲರ್ಶಿಪ್ ತಕ್ಷಣ ಬಿಡುಗಡೆ, ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜನ್ಯ, ದಾಳಿ ತಡೆಗಟ್ಟುವುದು, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರಾದ ಧಮೇಂರ್ ದ್ರ ಪ್ರಧಾನ ರಾಜೀನಾಮೆ, ಎಲ್ಲವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳ ರಕ್ಷಣೆ, ಗ್ರಾಮೀಣ ಪ್ರದೇಶದ ಎಲ್ಲಹಳ್ಳಿಗಳಿಗೂ ಬಸ್ ಸೌಲಭ್ಯ, ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ, ಶಾಲೆ, ಕಾಲೇಜುಗಳಲ್ಲಿಮೂಲ ಸೌಕರ್ಯ ಒದಗಿಸುವ ನಿರ್ಣಯ ಕೈಗೊಳ್ಳಲಾಯಿತು.

ನೂತನ ಸಮಿತಿ ರಚನೆ: ಅಧ್ಯಕ್ಷ ಅನಿಲ್ ಆರ್ , ಕಾರ್ಯದರ್ಶಿ ಶರಣು ಮಾಟರಂಗಿ, ಉಪಾಧ್ಯಕ್ಷ ಗುರುಕಿರಣ್ , ಮಹಮ್ಮದ್ ಇರ್ಫಾನ್ , ತನುಜಾ ರಾಯಬಾಗಿ, ಸಹ ಕಾರ್ಯದರ್ಶಿ ಪ್ರಸನ್ನ ಮೂರ್ತಿ, ಕವಿತಾ ರಾಥೋಡ್ , ಶಿವಬಸಯ್ಯ, ಸದಸ್ಯರು ಕಾರ್ತಿಕ್ ಪವರ್ , ಸುನಿಲ್ ಜುಂಜಾ, ಮಂಜುನಾಥ್ , ಪಾರ್ವತಿ, ಅಂಬಿಕಾ, ವರಣ, ಪ್ರಸಾದ್ , ಸೃಷ್ಟಿ ಹೂಗಾರ, ಉಮಾ ಮಾದೇಗೌಡ, ಪ್ರಜ್ವಲ್ , ಅಕ್ಕಮ್ಮ ರಾಥೋಡ್ , ರೇಣುಕಾ, ತಾಲೂಕಿನ ವಿದ್ಯಾರ್ಥಿನಿಯರ್ ಉಪ ಸಮಿತಿ ಸಂಚಾಲಕ ರೇಣುಕಾ, ಕುಂಕುಮ ರಕ್ಷಿತಾ, ಸದಸ್ಯರಾಗಿ ಸೃಷ್ಟಿ ಉಗಾರ, ಶರಣಮ್ಮ ಆಲೂರು, ಅಕ್ಷತಾ, ಐಶ್ವರ್ಯ, ಕಾವೇರಿ ಮೇಟಿ, ಸಂಜನಾ, ಪ್ರೇಮ ಗೌಡ, ಸಮತಾ ರಾಥೋಡ್ , ಕೀರ್ತಿ, ಅನುಷಾ, ಶಂಕ್ರಮ್ಮ, ವಿದ್ಯಾ, ಭೀಮವ್ವ, ಬಸ್ಸಮ್ಮ, ಸಿದ್ದಮ್ಮ ಆಯ್ಕೆಯಾದರು. ಶರಣು ಮಾಟರಂಗಿ, ಮಹಮ್ಮದ್ ಇರ್ಫಾನ್ , ಕುಂಕುಮ, ಪ್ರಸನ್ನ ಮೂರ್ತಿ ಇದ್ದರು.

ಫೋಟೊ: 21 ಜಿಜೆಡಿ 6:

ಗಜೇಂದ್ರಗಡ ತಾಲೂಕು ಎಸ್ ಎಫ್ ಐ ಸಮ್ಮೇಳನವನ್ನು ಮಂಗಳವಾರ ಪ್ರಾ.ವಸಂತರಾವ್ ಗಾರ್ಗಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.