ನ್ಯಾಮತಿ ತಾಲೂಕು ಕೇಂದ್ರವಾಗಿದ್ದರು ಬಸ್ ನಿಲ್ದಾಣದ ಸೌಲಭ್ಯ ಇಲ್ಲ. ಇಲ್ಲಿನ ಕಲ್ಯಾಣ ಮಂದಿರದ ಎದುರಿಗೆ ಜನರು ಬಿಸಿಲು, ಮಳೆಯಲ್ಲಿನಿಂತು ಬಸ್ಸಿಗಾಗಿ ಕಾಯುತ್ತಾರೆ. ಹತ್ತಿರದಲ್ಲಿಎಲ್ಲೂಸಾರ್ವಜನಿಕ ಶೌಚಾಲಯದ ಸೌಲಭ್ಯ ಇರುವುದಿಲ್ಲ, ಪ್ರಕೃತಿ ಕರೆಗೆ ಸಾರ್ವಜನಿಕರು ಪರದಾಡುವಂತಾಗಿದೆ. ಸ್ಥಳೀಯ ಆಡಳಿತ ಮತ್ತು ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಪಟ್ಟಣದ ಕೆಲ ಕಡೆ ಬಸ್ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಬೇಕು.- ಅ. ಹಂಪಣ್ಣ ನ್ಯಾಮತಿ
-----
* ಸ್ಮಾರ್ಟ್ ಸಿಟಿ ಸ್ಮಾಲ್ -ಸ್ಮೆಲ್ ಸಿಟಿ
ದಾವಣಗೆರೆಯ ರಸ್ತೆಗಳಲ್ಲಿಫುಟ್ ಪಾತ್ ಮೇಲೆ ಅಂಗಡಿಗಳು, ಜೊತೆಗೆ ರಸ್ತೆ ಮೇಲೆಯೇ ತಳ್ಳು ಗಾಡಿಗಳ ಜಾತ್ರೆ... ಎಲ್ಲಾಸರ್ಕಲ್ ಗಳ ತಿರುವಿನಲ್ಲಿಗಾಡಿಗಳು, ಆಟೋಗಳು, ಆಪೇ ಗಾಡಿಗಳು ಜೊತೆಗೆ ಫುಟ್ ಪಾತ್ ವ್ಯಾಪಾರಿಗಳು ತುಂಬಿಕೊಡಿದ್ದಾರೆ. ಇಲ್ಲಿಒನ್ ವೇ ಎಂಬುದು ಲೆಕ್ಕಕ್ಕೆ ಇಲ್ಲ, ಸಿಗ್ನಲ್ ಲೈಟ್ ಜಂಪ್ ಮಾಡುತ್ತಾರೆ, ಈ ನಿಯಮಗಳನ್ನು ಯಾರು ಪಾಲಿಸುವುದಿಲ್ಲ. ಕೈಯಲ್ಲಿಜೀವ ಹಿಡಿದು ಗಾಡಿ ಓಡಿಸಬೇಕು. ಕಾರುಗಳು ಎಡ ಬಲ ಎನ್ನದೇ ಎಲ್ಲೆಂದರಲ್ಲಿನಿಲುಗಡೆ ಆಗಿರುತ್ತವೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಗೊತ್ತಿಲ್ಲ. ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ, ಆದರೆ ಇಲ್ಲಿರುವುದು ಸ್ಮಾಲ್ ಸಿಟಿ ಹಾಗೂ ಸ್ಮೆಲ್ ಸಿಟಿ ಆಗಿದೆ. ಓವರ್ ಸ್ಪೀಡ್ ಗಾಡಿಗಳು, ಸೈಲೆನ್ಸೆರ್ ಇಲ್ಲದ ಗಾಡಿಗಳ ಆರ್ಭಟ ಜಾಸ್ತಿ ಆಗುತ್ತಿದೆ.