ಸಂವಾದ ಮಾದರಿ ತರಗತಿಯಿಂದ ಸೃಜನಶೀಲತೆ

Contributed bygururaja.jd@gmail.com|Vijaya Karnataka
creativity dimension of students through conversational model classes
ಸಂವಾದ ಮಾದರಿ ತರಗತಿಯಿಂದ ಸೃಜನಶೀಲತೆ

ವಿಕ ಸುದ್ದಿಲೋಕ ಶಿವಮೊಗ್ಗ
ತರಗತಿಗಳು ಏಕಮುಖ ಬೋಧನೆಯ ವೇದಿಕೆಯಾಗದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದದ ರೂಪ ಪಡೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿಸೃಜನಶೀಲತೆಯ ಭದ್ರ ಬುನಾದಿ ಹಾಕಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್ .ಎನ್ .ನಾಗರಾಜ ಹೇಳಿದರು.

ನಗರದ ಎಚ್ .ಎಸ್ .ರುದ್ರಪ್ಪ ರಾಷ್ಟ್ರೀಯ ಪಿಯು ಕಾಲೇಜಿನಿಂದ ಕುವೆಂಪು ರಂಗಮಂದಿರದಲ್ಲಿಗುರುವಾರ ಹಮ್ಮಿಕೊಂಡಿದ್ದ ಕಾಲೇಜಿನ ವಿದ್ಯಾರ್ಥಿ ಸಾಂಸ್ಕತ್ರೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್ ಎಸ್ ಎಸ್ ಘಟಕ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಈ ಹಂತದಲ್ಲಿವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಪ್ರೇರಣೆ ನೀಡುವ, ಮೌಲ್ಯಾಧಾರಿತ, ಸರ್ವತೋಮುಖ ಬೆಳವಣಿಗೆ ಸಾಧಿಸಲು ವಿವಿಧ ವಿದ್ಯಾರ್ಥಿ ಘಟಕಗಳು ಪೂರಕ ಶಕ್ತಿಯಾಗಿ ಕೆಲಸ ಮಾಡುತ್ತವೆ. ಕಲಿಯುವ ಪ್ರತಿ ವಿಷಯದಲ್ಲೂಹೊಸತನ ಅರಿಯುವ ಉತ್ಸಾಹ ಬೆಳೆಸಿಕೊಳ್ಳಿ. ಪೋಷಕರ ಆಶೋತ್ತರಗಳನ್ನು ಗೌರವಿಸಿ ಎಂದು ತಿಳಿಸಿದರು.

ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿಮಾತನಾಡಿ, ಜೀವನದಲ್ಲಿಸಾಧನೆಯ ಶಿಖರ ತಲುಪಲು ಬುದ್ಧಿವಂತಿಕೆ ಜತೆಗೆ, ಶಿಸ್ತು, ಉತ್ತಮ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಮುಖ್ಯ. ಮಕ್ಕಳ ವಿದ್ಯಾಭ್ಯಾಸವನ್ನು ಕೇವಲ ಕಾಲೇಜಿನ ಜವಾಬ್ದಾರಿ ಎಂದು ಭಾವಿಸದೆ, ಪೋಷಕರು ಕಾಲಕಾಲಕ್ಕೆ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರ ಜತೆ ಚರ್ಚಿಸಬೇಕು. ಮಕ್ಕಳ ಕಲಿಕೆಯ ಪ್ರಗತಿ, ನಡವಳಿಕೆ, ಆಸಕ್ತಿ ಹಾಗೂ ಸವಾಲುಗಳ ಕುರಿತು ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ವಿವಿಧ ಕ್ಷೇತ್ರದಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಆರ್ .ಆದಿತ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಎಫ್ .ಕುಟ್ರಿ, ಡಾ.ವಿನಯ ಶ್ರೀನಿವಾಸ ಮತ್ತಿತರರಿದ್ದರು.

=====

23ಎಸ್ ಎಂಜಿ10

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿಆಯೋಜಿಸಿದ್ದ ಎಚ್ .ಎಸ್ .ರುದ್ರಪ್ಪ ಪಿಯು ಕಾಲೇಜಿನ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮವನ್ನು ಎಸ್ .ಎನ್ .ನಾಗರಾಜ ಉದ್ಘಾಟಿಸಿದರು.