ಈ ಹಿಂದೆ ಬರ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಇಂಡಿ ತಾಲೂಕು ವ್ಯಾಪ್ತಿಯ ಸಾವಳಸಂಗದಲ್ಲಿನೋಡುಗರು ಆಶ್ಚರ್ಯಗೊಳ್ಳುವಂತೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿವೃಕ್ಷೋದ್ಯಾನ ತಲೆ ಎತ್ತಿದೆ. 100 ಎಕರೆ ಪ್ರದೇಶದಲ್ಲಿಸುಂದರ ಕಾಡು ಬೆಳೆಸಲಾಗುತ್ತಿದೆ. ಸೈನ್ಸ್ ಪಾರ್ಕ್ ನಿರ್ಮಾಣವಾಗಿ ಮಕ್ಕಳಿಗೆ ವಿಜ್ಞಾನದ ಕುತೂಹಲ ತಣಿಸುತ್ತದೆ. ರೋಪ್ ವೇ, ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ಸಿದ್ಧತೆ ನಡೆದಿದೆ. ಏತನ್ಮಧ್ಯೆ ರೋಮಾಂಚನಕಾರಿ ‘ಜಿಪ್ ಲೈನ್ ’ ಸಾಹಸ ಕ್ರೀಡೆ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಆಲಮಟ್ಟಿಯ ರಾಕ್ ಗಾರ್ಡ್ ನಲ್ಲಿಜಿಪ್ ಲೈನ್ ಅಳವಡಿಕೆ ಕಾರ್ಯ ಇನ್ನೂ ಡಿಸೈನ್ ಹಂತದಲ್ಲಿದೆ. ಆದರೆ ಹಚ್ಚಹಸಿರಿನೊಂದಿಗೆ ಗುಡ್ಡ-ಬೆಟ್ಟದಿಂದ ಕಂಗೊಳಿಸುತ್ತಿರುವ ಸಾವಳಸಂಗದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನದಲ್ಲಿಜಿಪ್ ಲೈನ್ ಸಾಹಸ ಕ್ರೀಡೆ ಕೇವಲ 15 ದಿನಗಳಲ್ಲಿಆರಂಭವಾಗಲಿದೆ.
100 ಎಕರೆ ಪ್ರದೇಶದಲ್ಲಿ33,500 ನಾನಾ ಬಗೆಯ ಗಿಡ ಬೆಳೆಸಿ ದಟ್ಟ ಕಾಡು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸೈನ್ಸ್ ಪಾರ್ಕ್, ಚಿಕ್ಕ ಮಕ್ಕಳಿಗೆ ಹಳ್ಳಿ ಸೊಗಡು ಉದ್ಯಾನ, ಯುವಕರಿಗೆ ಸಾಹಸ ಕ್ರೀಡೆಗಳು ಹೀಗೆ ಎಲ್ಲವಯೋಮಾನದವರೂ ಇಲ್ಲಿಗೆ ಬಂದು ಮನರಂಜನೆ ಪಡೆಯಬಹುದಾಗಿದೆ.
15ದಿನದಲ್ಲಿಆರಂಭ:
‘‘ ಅರಣ್ಯ ಇಲಾಖೆಯಡಿ 30 ಲಕ್ಷ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ಜಿಪ್ ಲೈನ್ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಸಿದ್ಧಗೊಳಿಸಲಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಈ ಸಾಹಸ ಕ್ರೀಡೆ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ವರೆಗೆ ಜಿಲ್ಲೆಯ ಜನರು ಸಾಹಸ ಕ್ರೀಡೆಗಳಿಗೆ ದಾಂಡೇಲಿ, ಬೆಂಗಳೂರು, ಕೊಡಗುದಂತಹ ಪ್ರದೇಶಗಳಿಗೆ ಕಡೆ ಮುಖ ಮಾಡಬೇಕಿತ್ತು. ಆದರೆ ಈ ಸಾಹಸ ಕ್ರೀಡೆ ಈಗ ಜಿಲ್ಲೆಯ ಒಳಗೆ ದೊರೆಯಲಿದೆ.
ಸೈನ್ಸ್ ಪಾರ್ಕ್ನಲ್ಲಿಮಕ್ಕಳ ಚಿಲಿಪಿಲಿ:
ಸೈನ್ಸ್ ಪಾರ್ಕ್ ಆರಂಭವಾಗಿ ಒಂದು ತಿಂಗಳಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳ ಭೇಟಿ ಶುರುವಾಗಿದೆ. ಸೈನ್ಸ್ ಪಾರ್ಕ್ನಲ್ಲಿವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿಸ್ಮಯಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಆಕಾಶ ವೀಕ್ಷಣೆಗೂ ಸಕಲ ವ್ಯವಸ್ಥೆ ನಡೆದಿದೆ. ವೈಜ್ಞಾನಿಕ ಸಲಕರಣೆ ಬಳಸಿ ದೂರದ ನಕ್ಷತ್ರ ಪುಂಜಗಳ ವೀಕ್ಷಣೆ ಮಾಡಲಾಗುತ್ತಿದೆ.
ಹಳ್ಳಿ ಸೊಗಡು ನಿರ್ಮಾಣ:
ಚಿಕ್ಕ ಮಕ್ಕಳಿಗೆ ಹಳ್ಳಿ ಜನರ ಜೀವನ ಶೈಲಿ ಪರಿಚಯಿಸಲು 1 ಎಕರೆಯಲ್ಲಿಹಳ್ಳಿ ಸೊಗಡು ನಿರ್ಮಿಸಲಾಗಿದೆ. ಇಲ್ಲಿಮಕ್ಕಳು ಖುಷಿಯಿಂದ ಆಟೋಟ, ಹಳೆ ಕಾಲದ ಜನರ ಜೀವನದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ರೋಪ್ ವೇ, ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೂ ಅನುಮೋದನೆ ದೊರೆತಿದ್ದು, ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ.
--------
2.55 ಕೋಟಿ ಖರ್ಚು
ಸಾವಳಸಂಗದಲ್ಲಿಅರಣ್ಯ ಪ್ರದೇಶ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ 1.65 ಕೋಟಿ ರೂ., ಡಿಪಿಎಆರ್ ನಿಂದ 50 ಲಕ್ಷ ರೂ., ಸಿಎಸ್ ಆರ್ ಫಂಡ್ 35 ಲಕ್ಷ ರೂ. ಹಾಗೂ ಶಾಸಕರ ಅನುದಾನದಡಿ 5 ಲಕ್ಷ ರೂ. ಸೇರಿ ಒಟ್ಟು 2 ಕೋಟಿ, 55 ಲಕ್ಷ ರೂ. ಖರ್ಚು ಮಾಡಲಾಗಿದೆ.
---
ರಾತ್ರಿ ವಾಸ್ತವ್ಯಕ್ಕೆ ಟೆಂಟ್ ಸೌಲಭ್ಯ
ಪ್ರವಾಸಿಗರಿಗೆ ರಾತ್ರಿ ಉಳಿದುಕೊಳ್ಳಲು 3 ಎಕರೆ ಪ್ರದೇಶದಲ್ಲಿ4 ಟೆಂಟ್ ನಿರ್ಮಿಸಲಾಗಿದೆ. ಇಲ್ಲಿಯೇ ರಾತ್ರಿ ವಾಸ್ತವ್ಯ ಮಾಡಿ ಪ್ರಕೃತಿ ಸೊಬಗು ವೀಕ್ಷಿಸಬಹುದಾಗಿದೆ. ಜನ್ಮ ದಿನಾಚರಣೆ, ವಿವಾಹ ವಾರ್ಷಿಕೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮ ಆಯೋಜನೆಗೆ ಜಾಗ ಮೀಸಲಿಡಲಾಗಿದೆ. ಇಲ್ಲಿಯೇ ಗುಡ್ಡ, ಬೆಟ್ಟಗಳು ಇರುವುದರಿಂದ ನಿತ್ಯ ಹಲವು ಜನರು ಟ್ರೆಕ್ಕಿಂಗ್ ಗೆ ಬರುತ್ತಿದ್ದಾರೆ. ಎತ್ತರ ಪ್ರದೇಶದಲ್ಲಿನಿರ್ಮಾಣವಾದ ಓಪನ್ ಥಿಯೇಟರ್ ನಲ್ಲಿಏಕಕಾಲದಲ್ಲಿ150 ಜನರು ನಿಂತು ಸುತ್ತಲಿನ ಪ್ರದೇಶವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
---
ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ
ಅರಣ್ಯ ಪ್ರದೇಶದಲ್ಲಿಕ್ಯಾಂಟೀನ್ ಗೆ ಸುಸಜ್ಜಿತ ಕಟ್ಟಡ ಸಿದ್ಧವಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆದು ಕ್ಯಾಂಟೀನ್ ಆರಂಭಿಸಲಾಗುವುದು. ಕ್ಯಾಂಟೀನ್ ಆದರೆ ಪ್ರವಾಸಿಗರಿಗೆ ಊಟ, ಉಪಾಹಾರ ಹಾಗೂ ಪಾನೀಯ ಸೌಲಭ್ಯಗಳು ದೊರೆಯಲಿವೆ,’’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
-----
ಸಾವಳಸಂಗ ಅರಣ್ಯ ಪ್ರದೇಶದಲ್ಲಿಜಿಪ್ ಲೈನ್ ಸಾಹಸ ಕ್ರೀಡೆ 15 ದಿನಗಳಲ್ಲಿಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸೈನ್ಸ್ ಪಾರ್ಕ್ ಆರಂಭವಾಗಿದೆ. ಚಾರಣಿಗರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ವ್ಯವಸ್ಥೆ ಇದೆ.
-ಮಂಜುನಾಥ ಧೂಳೆ ವಲಯ ಅರಣ್ಯ ಅಧಿಕಾರಿ, ಇಂಡಿ
--
ಸಿದ್ದೇಶ್ವರ ಶ್ರೀಗಳ ಅಪ್ಪಣೆಯಂತೆ ಸಾವಳಸಂಗದಲ್ಲಿಅರಣ್ಯ ಬೆಳೆಸಿ ಅಭಿವೃದ್ಧಿ ಮಾಡಲಾಗಿದೆ. ಜಿಪ್ ಲೈನ್ ಆರಂಭವಾಗಲಿದೆ. ವರ್ಷದೊಳಗೆ ರೋಪ್ ವೇ, ಗ್ಲಾಸ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಸಾವಳಸಂಗವನ್ನು ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುತ್ತಿದೆ.
-ಯಶವಂತರಾಯಗೌಡ ಪಾಟೀಲ ಇಂಡಿ ಕ್ಷೇತ್ರದ ಶಾಸಕರು
----------
ಏನೇನಿವೆ?
*100 ಎಕರೆ ಅರಣ್ಯ ಪ್ರದೇಶ
*33,500 ನಾನಾ ಬಗೆಯ ಗಿಡಗಳು
*ಜಿಪ್ ಲೈನ್ ಗೆ 30 ಲಕ್ಷ ರೂ. ವೆಚ್ಚ
*ಹೈಟೆಕ್ ಸೈನ್ಸ್ ಪಾರ್ಕ್ ನಿರ್ಮಾಣ
*ವೀಕ್ಷಣೆಗೆ ಓಪನ್ ಥಿಯೇಟರ್
----------
ಹೋಗುವುದು ಹೇಗೆ?
ವಿಜಯಪುರ ಜಿಲ್ಲಾಕೇಂದ್ರದಿಂದ ಸಾವಳಸಂಗ 40 ಕಿಮೀ ದೂರದಲ್ಲಿದೆ. ವಿಜಯಪುರದಿಂದ ಹೊರ್ತಿಗೆ ಬಸ್ , ಸ್ವಂತ ವಾಹನಗಳ ಮೂಲಕ ಹೋಗಬಹುದು. ಹೊರ್ತಿಯಿಂದ ಸಾವಳಸಂಗ 6 ಕಿಮೀ ದೂರವಿದೆ. ಹೊರ್ತಿಯಿಂದ ಸಾವಳಸಂಗಗೆ ಬಸ್ ಸಂಚಾರ ಕಡಿಮೆ. ಖಾಸಗಿ ಇಲ್ಲವೇ ಸ್ವಂತ ವಾಹನಗಳ ಮೂಲಕ ಹೋಗಬಹುದು.
------
ಪೋಟೊಗಳು
ಜಿಪ್ ಲೈನ್ , ಓಪನ್ ಥಿಯೇಟರ್ , ಸೈನ್ಸ್ ಪಾರ್ಕ್, ಗೇಮಿಂಗ್ ಪಾರ್ಕ್
---
ಸಾವಳಸಂಗ ಅರಣ್ಯ ಪ್ರದೇಶದಲ್ಲಿಜಿಪ್ ಲೈನ್ ಪ್ರಾಯೋಗಿಕ ಪರೀಕ್ಷೆ.