ವಿದ್ಯಾರ್ಥಿಗಳ ಹೋರಾಟ ಹೈಜಾಕ್ ?

Contributed byBeeralinge gowda|Vijaya Karnataka
students protest hijacked violence and destruction of childrens future
** ಚಳವಳಿಯಲ್ಲಿಸಮಾಜಘಾತುಕ ಶಕ್ತಿಗಳು ಭಾಗಿ | 10 ಎಫ್ ಐಆರ್ ದಾಖಲು

ಹೊಸದಿಲ್ಲಿ: ನೀಟ್ ಅಕ್ರಮದ ವಿರುದ್ಧದ ವಿದ್ಯಾರ್ಥಿಗಳ ಹೋರಾಟವನ್ನು ಸಮಾಜಘಾತುಕ ಶಕ್ತಿಗಳು ಹೈಜಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಿಂಸಾಚಾರ ಸಂಬಂಧ 10 ಎಫ್ ಐಆರ್ ದಾಖಲಿಸಲಾಗಿದ್ದು, ದುಷ್ಟ ಕೃತ್ಯದಲ್ಲಿಭಾಗಿಯಾದವರ ಪಾಸ್ ಪೋರ್ಟ್ ರದ್ದುಗೊಳಿಸುವ ಚಿಂತನೆಯನ್ನು ಕೇಂದ್ರ ಸರಕಾರ ನಡೆಸಿದೆ.
ಕಳೆದ 20 ದಿನಗಳಿಂದ ಶಾಂತಿಯುತವಾಗಿ ನಡೆದ ಪ್ರತಿಭಟನೆ ಸಂಸತ್ ಚಲೋ ವೇಳೆ ಹಿಂಸಾಚಾರಕ್ಕೆ ತಿರುಗಲು ಹೊರಗಿನ ದುಷ್ಟಶಕ್ತಿಗಳು ಕಾರಣವಾಗಿವೆ. ಜುಲೈ 20ರ ಘರ್ಷಣೆಯ ಹಿಂದೆ ಮತೀಯ ಹಾಗೂ ಮೂಲಭೂತವಾದಿಗಳು, ಸಮಾಜ ವಿದ್ರೋಹಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿದ್ಯಾರ್ಥಿಗಳ ಪರವಾದ ಹೋರಾಟದಲ್ಲಿಭಾಗಿಯಾದವರ ಕೈಗಳಲ್ಲಿಖಡ್ಗಗಳು, ಕತ್ತಿಗಳು, ಧಾರ್ಮಿಕ ಗುರುತಿನ ಬರವಣಿಗೆಗಳು ಕಂಡುಬಂದಿವೆ. ಪೆನ್ , ಪುಸ್ತಕ ಇರಬೇಕಿದ್ದ ಕೈಗಳಲ್ಲಿಹಿಂಸಾಪ್ರೇರಕ ಮಾರಕಾಸ್ತ್ರಗಳು ಪ್ರತ್ಯಕ್ಷವಾಗಿವೆ. ಹೋರಾಟವನ್ನು ಸಮಾಜ ಘಾತುಕ ಶಕ್ತಿಗಳು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಂಸತ್ ಚಲೋ ವೇಳೆ ಕಲ್ಲುತೂರಾಟ, ಬ್ಯಾರಿಕೇಡ್ ಮುರಿಯುವ ಯತ್ನ, ಪೊಲೀಸ್ ವಾಹನಗಳ ಧ್ವಂಸ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲಾದ ಕೃತ್ಯಗಳ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದಾರೆ. ಘರ್ಷಣೆಯಲ್ಲಿಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 118 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದಿಲ್ಲಿಪೊಲೀಸರು ತಿಳಿಸಿದ್ದಾರೆ.

‘‘ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪರಿಸ್ಥಿತಿ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಪರಿಸ್ಥಿತಿ ಕೈಮೀರಿದಾಗ ಅಶ್ರುವಾಯು, ಲಾಠಿ ಚಾಜ್ ರ್ , ಪೆಲೆಟ್ ಬುಲೆಟ್ ಬಳಕೆ ಮಾಡಬೇಕಾಯಿತು,’’ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ಸಂಸತ್ ಚಲೋ ಗಲಭೆ ಸಂಬಂಧ ದಿಲ್ಲಿಪೊಲೀಸರು 10 ಎಫ್ ಐಆರ್ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಭಾರತೀಯ ನಾಗರಿಕ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿಪ್ರಕರಣ ದಾಖಲಿಸಲಾಗಿದೆ. ಹಿಂಸಾಚಾರದಲ್ಲಿಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ದುಷ್ಕೃತ್ಯ ಎಸಗಿದವರ ಪಾಸ್ ಪೋರ್ಟ್ ರದ್ದುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

......

ಬೇಡಿಕೆ ಪುನರುಚ್ಚರಿಸಿದ ರಾಗಾ

ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳ ತನಿಖೆಗೆ ತ್ವರಿತಗತಿ ಕೋರ್ಟ್ ಸ್ಥಾಪಿಸಿ, ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂಬ ಮೋದಿ ಭರವಸೆ ಮಾತಿಗೆ ಕಿಡಿಕಾರಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘‘ಯುವ ಜನರ ಭವಿಷ್ಯ ಹಾಳು ಮಾಡಿದವರು ನೀವು. ಶಿಕ್ಷಣ ವ್ಯವಸ್ಥೆ ನಾಶಪಡಿಸಿದ್ದೀರಿ. ಸೋರಿಕೆ ಹಿಂದಿನ ಶಕ್ತಿಗಳನ್ನು ರಕ್ಷಿಸಿದ್ದೀರಿ. ನೈತಿಕ ಹೊಣೆ ಹೊತ್ತುಕೊಂಡು ಸಚಿವ ಪ್ರಧಾನ್ ವಜಾಗೊಳಿಸಿ, ವಿದ್ಯಾರ್ಥಿಗಳ ಕ್ಷಮೆ ಯಾಚಿಸಿ,’’ ಎಂದು ‘ಎಕ್ಸ್ ’ನಲ್ಲಿಪೋಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಮಾತಿಗೆ ಧ್ವನಿಗೂಡಿಸಿದ ಸಿಜೆಪಿ ಸಹ, ‘‘ಸಚಿವ ಪ್ರಧಾನ್ ರಾಜೀನಾಮೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು,’’ ಎಂದು ಒತ್ತಾಯಿಸಿದೆ.

........(ಬಾಕ್ಸ್ )))

ಪೊಲೀಸ್ ವಾಹನ ತಡೆದ ಯುವತಿ

ಈ ನಡುವೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕರೆದೊಯ್ಯಲೆತ್ನಿಸಿದ ಪೊಲೀಸ್ ವಾಹನವನ್ನು ಯುವತಿಯೊಬ್ಬರು ತಡೆದು ನಿಲ್ಲಿಸಿರುವ ಘಟನೆ ಮುಂಬಯಿನಲ್ಲಿನಡೆದಿದೆ. ದಾದರ್ ನ ಶಿವಾಜಿ ಪಾರ್ಕ್ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಬಸ್ ಗೆ ತುಂಬಿಸಿ ಕರೆದೊಯ್ಯಲು ಮುಂದಾದ ಪೊಲೀಸ್ ವಾಹನ ಅಡ್ಡಗಟ್ಟಿದ 27 ವರ್ಷದ ರೂಪದರ್ಶಿ ರಿಯಾ ಅಹಿರ್ , ‘‘ವಿದ್ಯಾರ್ಥಿಗಳ ಬಂಧನಕ್ಕೆ ವಾರೆಂಟ್ ಇದೆಯಾ,’’ ಎಂದು ಪ್ರಶ್ನಿಸಿದರು. ಯುವತಿಯ ಪ್ರತಿರೋಧಕ್ಕೆ ಮಣಿದ ಪೊಲೀಸರು, ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದರು.

.......(ಬಾಕ್ಸ್ )))

ವಿದ್ಯಾರ್ಥಿಗಳಿಗೆ ಮದ್ರಾಸ್ ಐಐಟಿ ಕಟ್ಟಾಜ್ಞೆ

ದಿಲ್ಲಿಯ ಪ್ರತಿಭಟನೆ ಬೆಂಬಲಿಸಿ ಯಾರೂ ಸಾಮಾಜಿಕ ಜಾಲತಾಣದಲ್ಲಿವಿಡಿಯೊ ಹಂಚಿಕೊಳ್ಳಬಾರದು. ಪೋಸ್ಟ್ ಮಾಡಲಾದ ವಿಡಿಯೊಗಳನ್ನು ಕೂಡಲೇ ಡಿಲೀಟ್ ಮಾಡಬೇಕು ಮದ್ರಾಸ್ ಐಐಟಿ ತಾಕೀತು ಮಾಡಿದೆ. ಹೋರಾಟ ಬೆಂಬಲಿಸಿ ಇನ್ ಸ್ಟಾಗ್ರಾಂನಲ್ಲಿಮಾಡಲಾದ ಪೋಸ್ಟ್ ಗಮನಿಸಿದ ವಿವಿ ಆಡಳಿತ, ಶಿಕ್ಷಕರಾಗಲಿ, ವಿದ್ಯಾರ್ಥಿಗಳಾಗಲಿ, ಯಾವುದೇ ವಿಡಿಯೊ ಪೋಸ್ಟ್ ಮಾಡಬಾರದು. ಒಂದು ವೇಳೆ ಪೋಸ್ಟ್ ಮಾಡಿದ್ದರೆ ಡಿಲೀಟ್ ಮಾಡುವಂತೆ ನಿರ್ದೇಶನ ನೀಡಿದೆ.

ಬೆದರಿಕೆ ಹಾಕಿದ ಪೊಲೀಸ್ ಸಸ್ಟೆಂಡ್ :

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಮುಂಬಯಿನ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ‘‘ಹೋರಾಟದ ನೆಪದಲ್ಲಿಎಲ್ಲಾದರೂ ಕಾಣಿಸಿಕೊಂಡರೆ ಜೇಬಿನಲ್ಲಿಡ್ರಗ್ಸ್ ಇಟ್ಟು ಪ್ರಕರಣ ದಾಖಲಿಸುತ್ತೇವೆ. ಜಾಮೀನು ಸಿಗದಂತೆ ಮಾಡುತ್ತೇವೆ. ಇಡೀ ನಿಮ್ಮ ಜೀವನವೇ ನಾಶವಾಗಿ ಹೋಗಲಿದೆ,’’ ಎಂದು ಪವನ್ ಸಿಂಗ್ ಎಂಬ ಪೊಲೀಸ್ ಅಧಿಕಾರಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿಯ ಬೆದರಿಕೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶಿಸಿದ ಮುಂಬಯಿ ಪೊಲೀಸ್ ಉಪ ಆಯುಕ್ತರು, ಪೊಲೀಸ್ ಅಧಿಕಾರಿ ಪವನ್ ಸಿಂಗ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದರು.

...........(ಬಾಕ್ಸ್ +))))

ರಾಹುಲ್ ಹೋರಾಟ ನಾಟಕ

ಹೊಸದಿಲ್ಲಿ: ‘‘ವಿದ್ಯಾರ್ಥಿಗಳ ಹೆಸರಿನಲ್ಲಿಪ್ರಧಾನಿ ನಿವಾಸದ ಬಳಿ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆಯಲ್ಲಿಪ್ರಾಮಾಣಿಕತೆ ಇರಲಿಲ್ಲ. ರಾಜಕೀಯ ಲಾಭಕ್ಕೋಸ್ಕರ ಹಾದಿರಂಪ ಬೀದಿರಂಪ ಮಾಡಿದ್ದಾರೆ,’’ ಎಂದು ಸೋನಂ ವಾಂಗ್ಚುಕ್ ಪತ್ನಿ ಗೀತಾಂಜಲಿ ಅಂಗ್ಮೋ ಆರೋಪಿಸಿದ್ದಾರೆ.

‘‘ವಿದ್ಯಾರ್ಥಿಗಳ ಪರ ನೈಜ ಕಾಳಜಿ ಇದ್ದಲ್ಲಿಜಂತರ್ ಮಂತರ್ ನಲ್ಲಿಕೂತು ಹೋರಾಟ ನಡೆಸಬೇಕು. 20 ದಿನಗಳಿಂದ ಕಾಣೆಯಾಗಿದ್ದವರು, ರಾಜಕೀಯ ಲಾಭಕ್ಕೆ ಹೋರಾಟವನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಸಿದರು. ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸಿದರು. ಪ್ರತಿ ಬಾರಿಯೂ ಜನರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ,’’ ಎಂದು ಗೀತಾಂಜಲಿ ಟೀಕಿಸಿದ್ದಾರೆ.

ಗಾಂಧಿ ಸ್ಮೃತಿಯಲ್ಲಿಶ್ರದ್ಧಾಂಜಲಿ:

ಮತ್ತೊಂದೆಡೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರು ದಿಲ್ಲಿಯ ಗಾಂಧಿ ಸ್ಮೃತಿಯಲ್ಲಿನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮೃತಪಟ್ಟ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿಗಾಂಧಿ ಸ್ಮೃತಿಯಲ್ಲಿಸೇರಿದ ನಾಯಕರು, ಸರಕಾರದ ವೈಫಲ್ಯಕ್ಕೆ ಜೀವ ತೆತ್ತ ವಿದ್ಯಾರ್ಥಿಗಳ ಪರ ಹೋರಾಟ ಬೆಂಬಲಿಸಲು ನಿರ್ಧರಿಸಿದರು. ಇದೇ ವೇಳೆ ಪೊಲೀಸ್ ದಬ್ಬಾಳಿಕೆಯಲ್ಲಿಗಾಯಗೊಂಡ ವಿದ್ಯಾರ್ಥಿಗ ಪರ ಹೋರಾಟ ಮುಂದುವರಿಸಲು ನಿರ್ಧಾರ ಕೈಗೊಂಡರು.

**(ಬಾಕ್ಸ್ ))))

ಸೋನಿಯಾ ಶರಾವತ್ ಗೆ ಬಿಸಿ

ಈ ನಡುವೆ, ಸಾಮಾಜಿಕ ಜಾಲತಾಣದಲ್ಲಿಸಕ್ರಿಯವಾಗಿರುವ ರಾರ ಯಪಿಡ್ ಆ್ಯಕ್ಷನ್ ಪೋರ್ಸ್ ಉಪ ಕಮಾಂಡೆಂಟ್ ಸೋನಿಯಾ ಶರಾವತ್ ಗೆ ಇನ್ ಸ್ಟಾಗ್ರಾಂ ಪೋಸ್ಟ್ ಗಳ ಬಿಸಿ ತಟ್ಟಿದೆ. ಜುಲೈ 20ರ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ಸೋನಿಯಾ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿಪ್ರಕಟವಾದ ಪೋಸ್ಟ್ ಗಳ ಬಗ್ಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸ್ಪಷ್ಟೀಕರಣ ಕೋರಿದೆ.

ಸೋನಿಯಾ ಇನ್ ಸ್ಟಾದಲ್ಲಿಸತ್ತ ಜಿರಳೆ ಪೋಟೋ ಮೇಲೆ ‘‘ತಮ್ಮನ್ನು ತಾವು ಸರಿಪಡಿಸಿಕೊಳ್ಳಲಾಗದವರು ದೇಶವನ್ನು ಸರಿ ಮಾಡಲು ಬಯಸುತ್ತಾರೆ,’’ ಎಂದು ಪೋಸ್ಟ್ ವಿವಾದದ ಕಿಡಿ ಹೊತ್ತಿಸಿಸಿದೆ. ಆರ್ ಎಎಫ್ ಸಹಾಯಕ ಕಮಾಂಡೆಂಟ್ ಸೋನಿಯಾ ಶರಾವತ್ ಅವರು 6.2 ಲಕ್ಷ ಇನ್ ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. ಡ್ಯಾನ್ಸ್ , ಫಿಟ್ ನೆಸ್ , ಟ್ರೆಂಡಿಂಗ್ ರೀಲ್ಸ್ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಬಾಕ್ಸ…)))

2024ರ ಕಿಂಗ್ ಪಿನ್ ಖುಲಾಸೆ

ಈ ನಡುವೆ ಕಳೆದ 2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಅವರನ್ನು ಸಿಬಿಐ ಖುಲಾಸೆಗೊಳಿಸಿದೆ. ಸೋರಿಕೆ ಪ್ರಕರಣದ ಸೂತ್ರಧಾರ ಎನ್ನಲಾದ ಸಂಜೀವ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪ್ರಶ್ನೆಪತ್ರಿಕೆ ಹಂಚಿಕೆ ಮಾಡಿದ ಆರೋಪ ಸಾಬೀತುಪಡಿಸುವಂತಹ ಯಾವುದೇ ದಾಖಲೆಗಳು ಇಲ್ಲಎಂದು ಸಿಬಿಐ ತಿಳಿಸಿದೆ. ಬಿಹಾರದಲ್ಲಿಉಂಟಾಗಿದ್ದ ಸೋರಿಕೆ ಪ್ರಕರಣದ ತನಿಖೆಯನ್ನು ಸರಕಾರದ ಆದೇಶದಂತೆ ಸಿಬಿಐಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ 45 ಮಂದಿ ವಿರುದ್ಧ ಪಟನಾ ಹೈಕೋರ್ಟ್ ಗೆ ಚಾಜ್ ರ್ ಶೀಟ್ ಸಲ್ಲಿಸಿದೆ.

**

ಪರೀಕ್ಷಾ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳ ಆತಂಕ ಮತ್ತು ಕಳವಳಗಳು ಸಮಂಜಸ ಹಾಗೂ ನೈಜವಾಗಿವೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮ ನಿರ್ದಯವಾದುದು. ಇಂತಹ ಬಲಪ್ರಯೋಗ ‘ವಿಕಸಿತ ಭಾರತ’ ನಿರ್ಮಾಣದ ರಾಷ್ಟ್ರೀಯ ಗುರಿಯಿಂದ ಸಮಾಜದ ದೊಡ್ಡ ವರ್ಗವನ್ನೇ ದೂರ ಮಾಡುವ ಅಪಾಯವಿದೆ.

- ಮುರಳಿ ಮನೋಹರ್ ಜೋಶಿ, ಬಿಜೆಪಿ ಹಿರಿಯ ನಾಯಕ