ಇಂದು ಬಳಸಿ......... ಜೋಡಣೆದಾರರ ಮಜೂರಿ ರೂ.10 ಹೆಚ್ಚಳ ವಿ

Contributed bykarjol.bnt@gmail.com|Vijaya Karnataka
increase of 10 rs in labor wages of contractors progressive decision taken in banahatti
ಜೋಡಣೆದಾರರ ಮಜೂರಿ ಹೆಚ್ಚಳ

ವಿಕ ಸುದ್ದಿಲೋಕ ರಬಕವಿ-ಬನಹಟ್ಟಿ
ಸೈಜಿಂಗ್ ಹಾಗೂ ನೇಕಾರರ ಮಜೂರಿ ಹೆಚ್ಚಿಸಿದ ಬೆನ್ನಲ್ಲೇ ಜೋಡಣೆದಾರರ ಮಜೂರಿಯನ್ನೂ ಪ್ರತಿ ನೌವಾರಿ (18 ಮೊಳ) ಸೀರೆಗೆ 10 ರೂ. ಹೆಚ್ಚಳಕ್ಕೆ ಪವರ್ ಲೂಮ್ ಮಾಲೀಕರ ಸಂಘ ಹಾಗೂ ಜೋಡಣೆದಾರರ ಸಂಘದ ನಡುವೆ ನಡೆದ ಮಾತುಕತೆಯಲ್ಲಿಒಪ್ಪಿಗೆ ದೊರೆತಿದೆ.

ಬನಹಟ್ಟಿಯಲ್ಲಿಗುರುವಾರ ನಡೆದ ಸಭೆಯಲ್ಲಿಉಭಯ ಸಂಘಟನೆಗಳ ಪ್ರತಿನಿಧಿಗಳು ಚರ್ಚೆ ನಡೆಸಿದರು. ಮುಂದಿನ ಎರಡು ವರ್ಷಗಳವರೆಗೆ ಈ ಮಜೂರಿ ಹೆಚ್ಚಳ ಜಾರಿಯಲ್ಲಿರಲಿದೆ ಎಂದು ನಿರ್ಧರಿಸಲಾಯಿತು.

ಪವರ್ ಲೂಮ್ ಮಾಲೀಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ, ‘‘ಈ ಹಿಂದೆ ಪ್ರತಿ ಸೀರೆಗೆ ಕನಿಷ್ಠ 113 ರೂ.ದಿಂದ ಗರಿಷ್ಠ 300 ರೂ. ವರೆಗೆ ಮಜೂರಿ ನೀಡಲಾಗುತ್ತಿತ್ತು. ಇದೀಗ 123 ರೂ. ದಿಂದ 310 ರೂ. ವರೆಗೆ ಹೆಚ್ಚಿಸಲಾಗಿದೆ. ನೇಕಾರರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ನೀಡುವ ನಿಟ್ಟಿನಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ’’ ಎಂದರು.

ಪ್ರಭು ಕರಲಟ್ಟಿ, ಮಲ್ಲುಭದ್ರನ್ನವರ, ಚಂದ್ರು ಕುಲಗೋಡ, ವಿಶ್ವನಾಥ ಕೊಣ್ಣೂರ, ಪ್ರಕಾಶ ಮಹಾಜನ, ಜೋಡಣೆದಾರರ ಸಂಘದ ಅಧ್ಯಕ್ಷ ಪರಮಾನಂದ ಭಾವಿಕಟ್ಟಿ, ಸುರೇಶ ಮಠದ, ಮಹಾಂತೇಶ ನಾಗರಾಳ, ಬಸು ಮುರಗೋಡ ಮತ್ತಿತರರಿದ್ದರು.

ಬಿಎನ್ ಟಿ 23-2

ಫೋಟೊ ವಿವರ-

ಬನಹಟ್ಟಿಯಲ್ಲಿನಡೆದ ಜೋಡಣೆದಾರರ ಸಭೆಯಲ್ಲಿಸಂಘದ ಅಧ್ಯಕ್ಷ ಪರಮಾನಂದ ಭಾವಿಕಟ್ಟಿ ಮಾತನಾಡಿದರು.