ಬಾಟಂ

Contributed byShrividya Rao|Vijaya Karnataka
96458 pending cases in supreme court digitization of judiciary and resolution efforts
ದಶಕಗಳು ಕಳೆದರೂ ಸಿಗದ ತೀರ್ಪು

ಸುಪ್ರೀಂ ಕೋರ್ಟ್ ನಲ್ಲಿಸದ್ಯ 96 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದು, ಈ ಪೈಕಿ 26 ಪ್ರಕರಣಗಳು ಬರೋಬ್ಬರಿ 30 ವರ್ಷಗಳಿಗಿಂತಲೂ ಹಳೆಯದಾಗಿವೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, 2026ರ ಜುಲೈ 1ರ ವೇಳೆಗೆ ಲಭ್ಯವಿರುವ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮಾಹಿತಿಯ ಪ್ರಕಾರ, ಸುಪ್ರೀಂ ಕೋರ್ಟ್ ನಲ್ಲಿಒಟ್ಟು 96,458 ಪ್ರಕರಣಗಳು ಬಾಕಿ ಇವೆ. ದೇಶದ ವಿವಿಧ ಹೈಕೋರ್ಟ್ ಗಳಲ್ಲಿಸುಮಾರು 62 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಹಾಗೂ ತಾಲೂಕು/ಜಿಲ್ಲಾಕೆಳ ನ್ಯಾಯಾಲಯಗಳಲ್ಲಿ4.5 ಕೋಟಿಗೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ. ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ನ್ಯಾಯಾಲಯಗಳ ಡಿಜಿಟಲೀಕರಣ, ಇ-ಕೋರ್ಟ್ ಯೋಜನೆಗಳ ವಿಸ್ತರಣೆ ಮತ್ತು ಲೋಕ ಅದಾಲತ್ ಗಳ ಮೂಲಕ ರಾಜಿಸಂಧಾನಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಫೈಲ್ ನೆಮ್ - ಕೋರ್ಟ್