ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಒತ್ತಾಯವಿಕ ಸುದ್ದಿಲೋಕ ಕುಕನೂರು
2ಎ ಅಡಿಯಲ್ಲಿಯೇ ಉದ್ಯೋಗ ಮೀಸಲು ನೀಡಬೇಕು ಎಂದು ಆಗ್ರಹಿಸಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ಜಿಲ್ಲಾಪ್ರಧಾನ ಕಾರ್ಯದರ್ಶಿ ಬಸವರಾಜ ಜೋಳದ್ ಮಾತನಾಡಿ, ‘‘ ಬಣಜಿಗ ಸಮುದಾಯ ಶೈಕ್ಷಣಿಕವಾಗಿ ಅತಿ ಹಿಂದುಳಿದಿದೆ. ಸರಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಸಂವಿಧಾನದ ಸದಾಶಯಕ್ಕೆ ವ್ಯತಿರಿಕ್ತವಾಗಿದೆ. ಹೀಗಾಗಿ ಬಣಜಿಗ ಸಮುದಾವನ್ನು16(4) ಅಡಿಯಲ್ಲಿಸಾಮಾಜಿಕ ನ್ಯಾಯ ಒದಗಿಸಲು ಇಲಾಖೆಗೆ ಆದೇಶ ನೀಡಬೇಕು,’’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿಸಮಾಜದ ತಾಲೂಕಾಧ್ಯಕ್ಷ ಕಪತ್ತಪ್ಪ ಅಂಗಡಿ, ಉಪಾಧ್ಯಕ್ಷರಾದ ಕಲ್ಲಪ್ಪ ಅಂಗಡಿ, ಕಳಕಪ್ಪ ಇಲಕಲ್ , ಶರಣಪ್ಪ ಬೇಲ್ಲದ, ಈಶಪ್ಪ ನಾಲ್ವಾಡ, ಕಾರ್ಯದರ್ಶಿ ಚಂದ್ರಶೇಖರಪ್ಪ ಅಂಗಡಿ, ಖಜಾಂಚಿ ಪ್ರಭು ಹೊಂಬಳ, ಸಮಾಜದ ಜಿಲ್ಲಾಸಮಿತಿಯ ಶರಣಪ್ಪ ಗುತ್ತಿ, ಪ್ರಕಾಶ ಮುಧೋಳ, ಚನ್ನಪ್ಪ ಮುಂಡರಗಿ, ಯುವ ಘಟಕದ ಅಧ್ಯಕ್ಷ ವಿಜಯಕುಮಾರ ಅಂಗಡಿ, ಉಪಾಧ್ಯಕ್ಷ ವೀರಭದ್ರಪ್ಪ ಜವಳಿ, ವಿರೇಶ ಶೆಟ್ಟರ್ , ಕಾರ್ಯದರ್ಶಿ ಪ್ರಮೋದ ಅಂಗಡಿ, ಸಹ ಕಾರ್ಯದರ್ಶಿ ಶರಣಪ್ಪ ಜವಳಿ ಇದ್ದರು.
ಕೆಪಿಎಲ್ 23ಕೆಕೆಎನ್ ಪೋಟೊ: 1 2ಎ ಅಡಿಯಲ್ಲಿಯೇ ಉದ್ಯೋಗ ಮೀಸಲು ನೀಡಬೇಕು ಎಂದು ಆಗ್ರಹಿಸಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಕುಕನೂರು ಪಟ್ಟಣದಲ್ಲಿತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರಿಗೆ ಮನವಿ ಸಲ್ಲಿಸಲಾಯಿತು.