ಪಿಂಚಣಿ ಮೊತ್ತ ಹೆಚ್ಚಳಕ್ಕೆ ಆಗ್ರಹ

Contributed bymaruthi.sunagar@timesofindia.com|Vijaya Karnataka
pension amount increase demand eps 95 retired employees protest
ಪಿಂಚಣಿ ಮೊತ್ತ ಹೆಚ್ಚಳಕ್ಕೆ ಆಗ್ರಹ

-ಇಪಿಎಸ್ -95 ನಿವೃತ್ತ ಪಿಂಚಣಿದಾರರ ಸಂಘದಿಂದ ಪ್ರತಿಭಟನೆ
-ಕುಟುಂಬಸ್ಥರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಒತ್ತಾಯ

ವಿಕ ಸುದ್ದಿಲೋಕ ಬಳ್ಳಾರಿ

ಇಪಿಎಸ್ -95 ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು 7,500 ರೂ. ಗೆ ಹೆಚ್ಚಿಸುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ -95 ನಿವೃತ್ತ ಪಿಂಚಣಿದಾರರ ಸಂಘದಿಂದ ನಗರದ ಡಿಸಿ ಕಚೇರಿ ಬಳಿ ಪ್ರತಿಭ ಟಿಸಲಾಯಿತು.

‘‘ದೇಶಾದ್ಯಂತ ಲಕ್ಷಾಂತರ ಇಪಿಎಸ್ -95 ಪಿಂಚಣಿದಾರರು ಪ್ರಸ್ತುತ ತಿಂಗಳಿಗೆ ಸರಾಸರಿ 1,170 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಪಿಂಚಣಿ ಹೆಚ್ಚಳದ ಅವಶ್ಯಕತೆಯಿದೆ. ನಿವೃತ್ತರಿಗೆ ನೈಜ ವೇತನದ ಮೇಲೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆ ನೀಡಬೇಕು. ಪಿಂಚಣಿದಾರರಿಗೆ ಬರ ಭತ್ಯೆ (ಡಿಎ) ಹಾಗೂ ಕುಟುಂಬಸ್ಥರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇಪಿಎಸ್ -95 ವ್ಯಾಪ್ತಿಗೆ ಬಾರದ ನಿವೃತ್ತ ಉದ್ಯೋಗಿಗಳಿಗೆ ಮಾಸಿಕ 5,000 ರೂ. ಪಿಂಚಣಿ ನೀಡಬೇಕು,’’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ, ಎಚ್ .ಎ.ಆದಿಮೂರ್ತಿ, ಟಿ.ಚೆನ್ನಪ್ಪ, ಕೊಪ್ಪಳ ಎರ್ರಿಸ್ವಾಮಿ, ಕೊಟ್ಟೂರು ಅನಿಲ್ ಇನಾಂದಾರ್ , ಚೆನ್ನಬಸಪ್ಪ ಸೇರಿ ಇತರರು ಇದ್ದರು.

ಫೋಟೋ ಕ್ಯಾಪ್ಷನ್ : 16 ಮಾರುತಿ 1

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ -95 ನಿವೃತ್ತ ಪಿಂಚಣಿದಾರರ ಸಂಘದಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.