ಕಡ್ಡಾಯ

Contributed bymudholvk@gmail.com|Vijaya Karnataka
mandatory talent award for achievers a development that inspires the community
ಪ್ರತಿಭಾ ಪುರಸ್ಕಾರ , ಸಾಧಕರಿಗೆ ಸನ್ಮಾನ

ವಿಕ ಸುದ್ದಿಲೋಕ ಮುಧೋಳ
‘‘ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಬೇಕು. ಸಮಾಜದ ಬಡ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಬೇಕು,’’ಎಂದು ಕಲ್ಲಿನಾಥ ಶ್ರೀಗಳು ಹೇಳಿದರು.

ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿನಡೆದ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನದಲ್ಲಿಅವರು ಮಾತನಾಡಿದರು.

ಮೇಲ್ಮನೆ ಮಾಜಿ ಸದಸ್ಯ ಜಿ.ಎಸ್ .ನ್ಯಾಮಗೌಡ ಮಾತನಾಡಿ, ‘‘ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಾಗಿ ಇರಬೇಕು. ಎಲ್ಲರಂಗದಲ್ಲಿಯಶಸ್ವಿಯಾಗಿ ಬಾಳಿ ತೋರಿಸಬೇಕು,’’ಎಂದರು.

ಗವಿಮಠದ ಬಸವಲಿಂಗ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷತ್ರ್ಮಣ ಚಿನ್ನಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಬಸವಪ್ರಭು ಸರನಾಡಗೌಡರ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಸಿದ್ದರಾಮ ಮನಹಳ್ಳಿ, ಅಶೋಕ ನವಲಗುಂದ, ಆರ್ .ಜಿ.ಪಾಟೀಲ, ಡಾ.ಶರಣಬಸಪ್ಪ ಯತ್ನಳ್ಳಿ, ಸದಾಶಿವ ಹಲಗಲಿ, ಜಿ.ಎಸ್ .ಬಾಗಲಕೋಟೆ, ಪ್ರಭು ಕಲ್ಯಾಣಿ, ಡಿ.ಎಂ.ಸಾಹುಕಾರ, ಮಹಾದೇವಪ್ಪ ಹೊಸಕೋಟಿ, ನಿಂಗಪ್ಪ ಹಳ್ಳದ, ಬಸಪ್ಪ ಚಿನ್ನಣ್ಣವರ, ವಿಜಯಕೃಷ್ಣ ಗಾಣಿಗೇರ, ಹೊಳೆಬಸು ತೇಲಿ, ಶಿಕ್ಷಕ ಗಂಗಾಧರ ಗಾಣಿಗೇರ ಇದ್ದರು.

ಫೋಟೊ 23 ಎಂಡಿಎಲ್ 3

ಮುಧೋಳದ ಜ್ಯೋತಿ ಕಲ್ಯಾಣ ಮಂಟಪದಲ್ಲಿತಾಲೂಕು ಮಟ್ಟದ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.