ಕಾಸರಗೋಡು ಜಿಲ್ಲಾಸಮಿತಿಯ ನಿರ್ದೇಶನದಂತೆ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಸಮಾಲೋಚನಾ ಸಭೆ ಬದಿಯಡ್ಕ ಮಂಡಲ ಕಚೇರಿಯಲ್ಲಿನಡೆಯಿತು.ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋಪಕುಮಾರ್ ಉದ್ಘಾಟಿಸಿದರು. ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ, ಕಾರಡ್ಕ ಬ್ಲಾಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಮಣಿಯಾಣಿ ನೀರ್ಚಾಲು, ಖಾದರ್ ಮಾನ್ಯ, ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ಜಗನ್ನಾಥ ರೈ, ಕೃಷ್ಣದಾಸ್ ದರ್ಬೆತ್ತಡ್ಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಯೂತ್ ಕಾಂಗ್ರೆಸ್ ಜಿಲ್ಲಾಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ , ನಿರಂಜನ ರೈ ಮತ್ತಿತರರು ಮಾತನಾಡಿದರು.
ಜನಪ್ರತಿನಿಧಿಗಳಾದ ಅಶ್ವತಿ ಅಶೋಕನ್ , ಲೀಲಾವತಿ ಕುಂಟಾಲು ಮೂಲೆ, ಮಾಜಿ ಜನಪ್ರತಿನಿಧಿ ಅನಸೂಯ, ಮಂಡಲ ಕಾರ್ಯದರ್ಶಿಗಳಾದ ರವೀಂದ್ರ ಕುಂಟಾಲು ಮೂಲೆ, ರಾಮಕೃಷ್ಣನ್ , ಶಾಫಿ ಗೋಳಿಯಡಿ ಹಾಗೂ ಬ್ಲಾಕು, ಮಂಡಲ, ವಾರ್ಡ್ ಕಾಂಗ್ರೆಸ್ ಸಮಿತಿಯ ನೇತಾರರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿರಾಜ್ಯದಲ್ಲಿ ಇದೀಗ ಯುಡಿಎಫ್ ಸರಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸಿನ ಕಾರ್ಯಕರ್ತರು ಬಹು ಉತ್ಸಾಹದಿಂದ ತಳಮಟ್ಟದಿಂದಲೇ ಕಾರ್ಯಪ್ರವೃತ್ತರಾಗಬೇಕು. ಸರಕಾರವು ಪ್ರಕಟಗೊಳಿಸುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಕರೆ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆ(ಐಎನ್ ಟಿಯುಸಿ)ಯ ಜಿಲ್ಲಾಸಮಿತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲೀಲಾವತಿ ಪಟ್ಟಾಜೆ ಅವರನ್ನು ಗೌರವಿಸಲಾಯಿತು. ಲೋಹಿತಾಕ್ಷನ್ ಪಟ್ಟಾಜೆ ಸ್ವಾಗತಿಸಿದರು. ಕುಮಾರನ್ ನಾಯರ್ ವಂದಿಸಿದರು.