ಬಿ.ಸಿ.ರೋಡ್ ನಲ್ಲಿನಡೆದ ಯುವತಿಯ ಹತ್ಯೆ ಘಟನೆಗೆ ಸಂಬಂಧಿಸಿ ಆರೋಪಿ ಕೇಸರಿ ಶಾಲು ಮತ್ತು ಕುಂಕುಮ ಧಾರಣೆ ಮಾಡಿರುವಂತೆ ಆತನ ಫೊಟೊ ಎಡಿಟ್ ಮಾಡಿ ಅದರ ಕೆಳಗೆ ಬಜರಂಗದಳದ ಮುಖಂಡ ಹಾಗೂ ಬಜರಂಗದಳ ಶಾಖೆಯಿಂದ ತರಬೇತಿ ಪಡೆದಿದ್ದ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ದೂರು ನೀಡಿದ್ದು, ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.