ಕಾರ್ಗಿಲ್ ವಿಜಯೋತ್ಸವ

Contributed bygvittalslb@gmail.com|Vijaya Karnataka
kargil vijayotsav a tribute to the valor of indian soldiers
ಕಾರ್ಗಿಲ್ ವಿಜಯೋತ್ಸವ

ಕೊಪ್ಪಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದಿಂದ ನಗರದ ಕಾಳಿದಾಸ ವಿದ್ಯಾ ಸಂಸ್ಥೆಯಲ್ಲಿಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿಭಾಗಿಯಾದಂತಹ ವಶಪ್ಪ ಚಲ್ಲಾಮಾತನಾಡಿ, ‘‘ಕಾರ್ಗಿಲ್ ವಿಜಯ ಭಾರತದ ಸೈನಿಕರ ಅಪ್ರತಿಮ ಶೌರ್ಯ, ಧೈರ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ,’’ ಎಂದರು. ಎಬಿವಿಪಿಯ ರಾಜ್ಯ ಸಹಕಾರ್ಯದರ್ಶಿ ಸುಮಂಗಲಾ, ಜಿಲ್ಲಾಸಂಚಾಲಕ ಹಮ್ಮಿಗೇಶ ಎಸ್ .ಪಿ. ಮಾತನಾಡಿದರು. ನಗರ ಕಾರ್ಯದರ್ಶಿ ಆದಿತ್ಯ ಹವಳೆ, ಕಾರ್ಯಕರ್ತರಾದ ಗುರುಬಸವ, ವಸಂತ್ ಕುಮಾರ್ , ಜಯಂತಿ, ನಿವೇದಿತ, ಆನಂದ್ ಸೇರಿ ಕಾರ್ಯಕರ್ತರು, ಕಾಳಿದಾಸ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

---

27-ಕೆಪಿಎಲ್ ವಿಠ್ಠಲ ಫೊಟೊ-20

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದಿಂದ ಕೊಪ್ಪಳದ ಕಾಳಿದಾಸ ವಿದ್ಯಾ ಸಂಸ್ಥೆಯಲ್ಲಿಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.