ವಿಕ ಸುದ್ದಿಲೋಕ ಯಲಬುರ್ಗಾ‘‘ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರು ಹಾಗೂ ಸದಸ್ಯರು ಕೈಗೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ,’’ ಎಂದು ಬೆಂಗಳೂರಿನ ಆರಾಮ ಫೌಂಡೇಶನ್ ಸಂಚಾಲಕಿ ಮಮತಾ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಸಾಯಿ ಪ್ಯಾಲೇಸ್ ನಲ್ಲಿಭಾನುವಾರ ನಡೆದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘‘ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಆತ್ಮವಿಶ್ವಾಸ ತೋರಬೇಕು,’’ ಎಂದರು.
ಅಧಿಕಾರಿ ಜಯಶ್ರೀ ಸಾಗರ ಮಾತನಾಡಿ, ‘‘ತಾಲೂಕಿನ ಸಂಸ್ಥೆಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯ ಪ್ರಶಂಸನೀಯ,’’ ಎಂದರು. ಕೊಪ್ಪಳ ಜಿಲ್ಲಾಅಧ್ಯಕ್ಷೆ ಮಂಜುಳಾ ಮುಲ್ಗೆ , ಮಾಜಿ ಅಧ್ಯಕ್ಷೆ ಚನ್ನಮ್ಮ ಆರ್ .ಪಾಟೀಲ್ , ಹಿರಿಯರಾದ ಶಕುಂತಲಾದೇವಿ ಮಾಲಿಪಾಟೀಲ್ , ಪಪಂ ಸದಸ್ಯೆ ಡಾ.ನಂದಿತಾ ಶಿವನಗೌಡ ದಾನರೆಡ್ಡಿ, ಮಹೇಶ್ವರಿ ಸಾವಣಿಗಿಮಠ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷೆ ಚನ್ನಮ್ಮ ಆರ್ .ಪಾಟೀಲ್ ಅವರು ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಸವಿತಾ ಮುರಡಿಮಠ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿ ಸುನೀತಾ ಎಂ. ಪತಂಗರಾಯ್ , ಖಜಾಂಚಿ ನಾಗರತ್ನ ನೂಲ್ವಿ, ಉಮಾ ಎಸ್ . ಹೊಸಮನಿ , ಎಡಿಟರ್ ಮಂಜುಳಾ ಹಾಲಕೇರಿ ಅಧಿಕಾರ ಸ್ವೀಕರಿಸಿದರು. ಸವಿತಾ ಆರ್ . ಓಜನಹಳ್ಳಿ ನಿರ್ವಹಿಸಿದರು. ಮಾಜಿ ಸೈನಿಕರಿಗೆ ಗೌರವಿಸಲಾಯಿತು.
---
27ವೈಎಲ್ ಬಿಪೋಟೋ02
ಯಲಬುರ್ಗಾದಲ್ಲಿನಡೆದ ಇನ್ನರ್ ವೀಲ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.