ನಾಳೆ ವೆಂಕಟಶಾಸ್ತ್ರಿ ದತ್ತಿನಿಧಿ ಉದ್ಘಾಟನೆ, ಪ್ರಶಸ್ತಿ ಪ್ರದಾನ ಸಮಾರಂಭ
ವಿಕ ಸುದ್ದಿಲೋಕ ಶಿವಮೊಗ್ಗಜಿಲ್ಲಾಬ್ರಾಹ್ಮಣ ಮಹಾಸಭಾದಿಂದ ಜು.29ರಂದು ಸಂಜೆ 5.30ಕ್ಕೆ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.
ಪತ್ರಿಕಾಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾರ್ಯಕ್ರಮವನ್ನು ಶೃಂಗೇರಿ ಶಾರದಾ ಪೀಠದ ಆಸ್ಥಾನ ಪಂಚಾಂಗಕರ್ತ ತಟ್ಟುವಟ್ಟು ವಾಸುದೇವ ಜೋಯಿಸ ಉದ್ಘಾಟಿಸಲಿದ್ದಾರೆ ಎಂದರು.
ಮಹಾಸಭಾ ಬೆಳವಣಿಗೆಯಲ್ಲಿಹಸೂಡಿ ವೆಂಕಟಶಾಸ್ತ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೆ ಮೊದಲು ಬ್ರಾಹ್ಮಣ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಕರ್ನಾಟಕ ಸಂಘದ ಸ್ಥಾಪನೆಗೆ ತಮ್ಮ ಜಾಗ ನೀಡಿದ್ದರು. ಈ ರೀತಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಈ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿಅವರ ಹೆಸರಿನಲ್ಲಿದತ್ತಿನಿಧಿ ಪ್ರಾರಂಭಿಸುತ್ತಿದ್ದೇವೆ. ಪ್ರತಿ ವರ್ಷ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಸಾಹಿತ್ಯ, ಸಾಂಸ್ಕತ್ರೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಸಾಧನೆ ಮಾಡಿರುವ ಶತಾವಧಾನಿ ಡಾ. ಆರ್ . ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.