30 ರಿಂದ ಮತಾಬಷಹೀದ್ ಜಾತ್ರೆ

Contributed byabhijeet.dhp@gmail.com|Vijaya Karnataka
matabashheed jatra celebrated with splendor
30 ರಿಂದ ಮತಾಬಷಹೀದ್ ಜಾತ್ರೆ

ದೇವರಹಿಪ್ಪರಗಿ: ತಾಲೂಕಿನ ಭಾವೈಕ್ಯದ ಪ್ರತೀಕವಾದ ಮುಳಸಾವಳಗಿ ಗ್ರಾಮದ ಹಜರತ್ ಮತಾಬಷಹೀದ್ ಜಾತ್ರಾ ಮಹೋತ್ಸವವು ಜು.30 ರಿಂದ ಆ.1 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜು.30 ರಂದು ಬೆಳಗ್ಗೆ 10 ಗಂಟೆಗೆ ಮುಕ್ತ ಕಬಡ್ಡಿ ಪಂದ್ಯಾವಳಿಯೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದೆ. ಸಂಜೆ 8 ಗಂಟೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂಕಲಗಿಯ ಕಾಸೀಮಪಟೇಲ ಪೋಲಿಸ್ ಪಾಟೀಲ ಅವರಿಂದ ಗಂಧೋತ್ಸವ ನೆರವೇರಲಿದೆ. ನಂತರ ಕುದುರೆ ಕುಣಿತ ಹಾಗೂ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ‘ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಜು.31 ರಂದು ಭಕ್ತರಿಂದ ದೀಪೋತ್ಸವ, ನೈವೇದ್ಯ ಸಮರ್ಪಣೆ ಹಾಗೂ ರಾತ್ರಿ 10 ಗಂಟೆಗೆ ಅಪ್ಪಾಜಿ ಮೆಲೊಡೀಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಆ.1 ರಂದು ತೆಕ್ಕೆ ಬಡಿದು ಚೀಲ ಎತ್ತುವುದು, ಗುಂಡು ಎತ್ತುವುದು ಹಾಗೂ ಸಂಗ್ರಾಣಿ ಕಲ್ಲುಸಿಡಿ ಎತ್ತುವ ಸಾಹಸ ಕ್ರೀಡೆಗಳು, ಸಂಜೆ 4 ಗಂಟೆಗೆ ಜಂಗೀ ಕುಸ್ತಿ ನಡೆಯಲಿವೆ. ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕದ ದ್ವಿತೀಯ ಪ್ರಯೋಗ ಮೂಡಿಬರಲಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವರಹಿಪ್ಪರಗಿಯಿಂದ ಮುಳಸಾವಳಗಿ ವರೆಗೆ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹಜರತ್ ಮತಾಬಷಹೀದ್ ಜಾತ್ರಾ ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.

ಫೋಟೊ

27ಡಿಎಚಪಿ02