ಪೇಜ್ 5 ಲೀಡ್

Contributed byDHEERAJ K|Vijaya Karnataka
belagavi dcc bank recruitment last date to apply for 104 posts is august 27
ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿನೇಮಕಾತಿ

- ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ
ಒಟ್ಟು ಹುದ್ದೆಗಳು

104

ಬೆಳಗಾವಿ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿಗಮವು (ಬಿಡಿಸಿಸಿ) ವಿವಿಧ ವೃಂದಗಳಲ್ಲಿಖಾಲಿ ಇರುವ ಒಟ್ಟು 104 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 27 ಕೊನೆಯ ದಿನವಾಗಿದೆ.

83 ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳು, 20 ಸಿಪಾಯಿ ಹುದ್ದೆಗಳು ಹಾಗೂ ಒಂದು ಬಂದೂಕುಧಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಬಿ.ಎ, ಬಿ.ಎಸ್ಸಿ ಅಥವಾ ಬಿ.ಕಾಂ. ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಸಿಪಾಯಿ ಹುದ್ದೆಗೆ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಬಂದೂಕುಧಾರಿ ಹುದ್ದೆಗೆ ಎಸ್ಸೆಸ್ಸೆಲ್ಸಿ ಜೊತೆಗೆ ಮಾಜಿ ಸೈನಿಕರಾಗಿದ್ದು, ಚಾಲ್ತಿಯಲ್ಲಿರುವ ಬಂದೂಕು ಪರವಾನಗಿ ಹೊಂದಿರಬೇಕು.

ವಯೋಮಿತಿ: ಆಗಸ್ಟ್ 27ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ, ಹಿಂದುಳಿದ ವರ್ಗದವರಿಗೆ 38 ವರ್ಷ ಹಾಗೂ ಎಸ್ ಸಿ/ಎಸ್ ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ: ಎಸ್ಸಿ/ಎಸ್ ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 500 ರೂ. ಹಾಗೂ ಇತರೆ ಎಲ್ಲಾವರ್ಗದ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು 15 ಅಂಕಗಳ ಸಂದರ್ಶನದ (1:5 ಅನುಪಾತದಲ್ಲಿ) ಆಧಾರದ ಮೇಲೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ತಕ್ಕಂತೆ 42,650ರಿಂದ 1,15,150 ರೂ.ರವರೆಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. ಹೆಚ್ಚಿನ ವಿವರಗಳಿಗಾಗಿ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಡಿಡಿಡಿ.ಚಿಛ್ಝಿaಜavಜಿd್ಚ್ಚಚಿ.ಚಿa್ಞk.ಜ್ಞಿಗೆ ಭೇಟಿ ನೀಡಬಹುದು.

ಕ್ವಿಕ್ ಲುಕ್

ಅರ್ಜಿ ಸಲ್ಲಿಕೆ ಆರಂಭ

ಜುಲೈ 27, 2026

ವೇತನ: 42,650- 1,15,150 ರೂ.