ಸಾಮಾಜಿಕ ಸೇವೆಯಲ್ಲಿಲಯನ್ಸ್ ಕ್ಲಬ್ ಮುಂಚೂಣಿ

Contributed bykeremane1964@gmail.com|Vijaya Karnataka
lions club an organization at the forefront of social service
ಸಾಮಾಜಿಕ ಸೇವೆಯಲ್ಲಿಲಯನ್ಸ್ ಕ್ಲಬ್ ಮುಂಚೂಣಿ

ವಿಕ ಸುದ್ದಿಲೋಕ ಶೃಂಗೇರಿ
ಒಂದು ಶತಮಾನಕ್ಕೂ ಅಧಿಕ ವರ್ಷಗಳಿಂದ ಪ್ರಪಂಚದಾದ್ಯಂತ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಲಯನ್ಸ್ ಕ್ಲಬ್ ಮುಂಚೂಣಿಯಲ್ಲಿದೆ ಎಂದು ಲಯನ್ಸ್ ಕ್ಲಬ್ ಮಾಜಿ ರಾಜ್ಯಪಾಲ ಡಾ. ಕೃಪಾ ಅಮರ್ ಆಳ್ವ ಹೇಳಿದರು.

ಪಟ್ಟಣದ ಶಾರದಾ ಎಲೈಟ್ ಸಭಾಂಗಣದಲ್ಲಿಇತ್ತೀಚೆಗೆ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿಮಾತನಾಡಿದರು.

ಸೇವಾ ಕಾರ್ಯವನ್ನು ಒಂದು ತಂಡವಾಗಿ ಮಾಡಿದಾಗ ಅದಕ್ಕೆ ಹೆಚ್ಚು ಅರ್ಥವಿದೆ. ಇನ್ನೊಬ್ಬರಿಗೆ ಸಹಾಯ ಮಾಡಿದರೆ ತೃಪ್ತಿ ಇರುತ್ತದೆ. ಸಮಾಜದಲ್ಲಿಕಷ್ಟದಲ್ಲಿರುವವರಿಗೆ ಸೇವೆ ನೀಡುವುದೇ ಮಾನವೀಯತೆ ಎಂದರು.

ನೂತನ ಅಧ್ಯಕ್ಷ ಎಂ.ರವಿ ಮಾತನಾಡಿ, ಸದಸ್ಯರ ಸಹಕಾರ ಪಡೆದು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆಯನ್ನು ಕ್ಲಬ್ ಅನೇಕ ವರ್ಷದಿಂದ ಮಾಡುತ್ತಿದೆ. ಇದಲ್ಲದೆ ವನ ಮಹೋತ್ಸವ, ರಸ್ತೆ ಜಾಗೃತಿ, ಮಾರ್ಗಸೂಚಿ ಫಲಕ ಮುಂತಾದ ಅಗತ್ಯ ಸೇವಾ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ರವಿ ಮಾಜಿ ಅಧ್ಯಕ್ಷ ಧರ್ಮಪ್ಪ ಹೆಗ್ಡೆ ಅವರಿಂದ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಕೀರ್ತಿಕುಮಾರ್ , ಖಜಾಂಚಿ ರಾಜೇಶ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಸದಸ್ಯರಾಗಿ ನರೇಂದ್ರ ಹೆಗ್ಡೆ, ರಜತ್ , ಪ್ರಾಣೇಶ್ ಕೂಳೆಗದ್ದೆ, ಡಾ. ಪ್ರಶಾಂತ ನಾಯ್ ್ಕ, ಅಜಿತ್ ಕಲ್ಕುಳಿ ಸೇರ್ಪಡೆಗೊಂಡರು.

ಇದೇ ವೇಳೆ ನಿವೃತ್ತ ಪೌರ ಕಾರ್ಮಿಕ ತಿಮ್ಮ ಮತ್ತು ರುದ್ರಭೂಮಿಯ ನಿರ್ವಾಹಕ ರವಿ ಅವರನ್ನು ಗೌರವಿಸಲಾಯಿತು. ಎಚ್ .ಜಿ.ವೆಂಕಟೇಶ್ , ಬಿ.ಜಿ.ಮಂಜುನಾಥ್ , ಪ್ರಕಾಶ್ ಹೆಗ್ಡೆ, ಕೆ.ಎಂ.ಮಂಜುನಾಥ್ , ಶಿಲ್ಪಾ ರವಿ, ಇಂದಿರಾ, ಉಮೇಶ್ ಪುದುವಾಳ್ , ಡಾ.ಅಣ್ಣಾದೊರೆ, ಡಿ.ಸಿ.ಶಂಕರಪ್ಪ ಹಾಗೂ ಇತರರಿದ್ದರು.

26ಶ್ರೀ1

ಶೃಂಗೇರಿ ಶಾರದಾ ಎಲೈಟ್ ಸಭಾಂಗಣದಲ್ಲಿಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿಹಿಂದೂ ರುದ್ರಭೂಮಿ ನಿರ್ವಾಹಕ ರವಿ ಅವರನ್ನು ಗೌರವಿಸಲಾಯಿತು.