ಯುವಕರು ದೇಶಸೇವೆಗೆ ಮುಂದಾಗಲಿ

Contributed bytotad.eranna@gmail.com|Vijaya Karnataka
let the youth march forward in patriotism
‘ ಯುವಕರು ದೇಶಸೇವೆಗೆ ಮುಂದಾಗಲಿ’

*ಕಾರ್ಗಿಲ್ ವಿಜಯ್ ದಿವಸ್ ರಾಷ್ಟ್ರದ ಹೆಮ್ಮೆ
* ಡಾ. ಶಿವನಗೌಡ ದಾನರಡ್ಡಿ ಸಲಹೆ

ವಿಕ ಸುದ್ದಿಲೋಕ ಯಲಬುರ್ಗಾ

‘‘ಕಾರ್ಗಿಲ್ ವಿಜಯ್ ದಿವಸ್ ಭಾರತದ ಇತಿಹಾಸದಲ್ಲಿಮಹತ್ವದ ದಿನವಾಗಿದ್ದು, ದೇಶದ ಗಡಿ ಕಾಯುವ ಸೈನಿಕರ ಶೌರ್ಯ, ತ್ಯಾಗವನ್ನು ಸ್ಮರಿಸುವ ಪವಿತ್ರ ದಿನವಾಗಿದೆ,’’ ಎಂದು ಮುಖಂಡ ಡಾ. ಶಿವನಗೌಡ ದಾನರಡ್ಡಿ ಹೇಳಿದರು.

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

‘‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಗೌರವಿಸುವ ಹಾಗೂ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ. ಮಾಜಿ ಸೈನಿಕರಿಗಾಗಿ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸಲಾಗಿದೆ.

ಮಾಜಿ ಸೈನಿಕರ ಅನುಭವವನ್ನು ಬಳಸಿಕೊಂಡು ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಭಾರತೀಯ ಸೇನೆಗೆ ಸೇರುವಂತೆ ಪ್ರೇರೇಪಿಸುವ ಕಾರ್ಯಕ್ಕೆ ಸಂಘ ಸಿದ್ಧವಾಗಿದೆ,’’ ಎಂದು ಹೇಳಿದರು.

ಸಿಪಿಐ ಮೌನೇಶ ಮಾಳಿ ಪಾಟೀಲ್ ಹಾಗೂ ವೀರಣ್ಣ ಹುಬ್ಬಳ್ಳಿ ಮಾತನಾಡಿ, ‘‘ದೇಶರಕ್ಷಣೆಯಲ್ಲಿಸೈನಿಕರ ಪಾತ್ರ ಅಮೂಲ್ಯವಾಗಿದೆ. ಯುವಕರು ದೇಶಭಕ್ತಿ , ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು,’’ ಎಂದರು.

ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಶಿವನಗೌಡ ಬನಪ್ಪಗೌಡ್ರ ಮಾತನಾಡಿದರು.

ಮಾಜಿ ಸೈನಿಕರಾದ ಬುಡ್ನೇಸಾಬ್ ನಾಯಕ, ಟಿ.ಎಸ್ .ಕರ್ನಲ್ , ಪಿಎಸ್ ಐ ವಿಜಯ ಪ್ರತಾಪ್ , ನೂರುದ್ದೀನ್ ಸಾಬ್ ಕುಕನೂರ, ಪರಿಸರ ಸಂರಕ್ಷಕ ಮೃತ್ಯುಂಜಯಸಾಬ್ , ಮಾಜಿ ಸೈನಿಕರ ಸಂಘದ ಮಾಜಿ

ಅಧ್ಯಕ್ಷ ಮಲ್ಲಪ್ಪ ಸರ್ವೆ ಉಪಸ್ಥಿತರಿದ್ದರು.

27ವೈಎಲ್ ಬಿಪೋಟೋ01

ಯಲಬುರ್ಗಾ ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿಮಾಜಿ ಸೈನಿಕರ ಸಂಘದಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.