ನಾಳೆಯಿಂದ ಮುಂಬಯಿ ವಾಲಿಕೇಶ್ವರ್ ಶಾಖಾ ಮಠದಲ್ಲಿಕೈವಲ್ಯ ಶ್ರೀ ಚಾತುಮಾಸ್ಯ

Contributed byharikatpadi@gmail.com|Vijaya Karnataka
kaivalya sri chaturmasya in mumbai valikeshwara religious and cultural events scheduled
ಕಟಪಾಡಿ: ಸಾರಸ್ವತ ಮಠ ಪರಂಪರೆಯ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 77ನೇ ಯತಿ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಅವರ 32ನೇ ಚಾತುಮಾಸ್ಯ ಧಾರ್ಮಿಕ ಅನುಷ್ಠಾನಗಳು ಮುಂಬಯಿ ವಾಲಿಕೇಶ್ವರ ಶಾಖಾ ಮಠದಲ್ಲಿಜು.29ರಿಂದ ಸೆ.26ರವರೆಗೆ ಧಾರ್ಮಿಕ ಅನುಷ್ಠಾನಗಳು, ಪ್ರವಚನ, ಭಜನೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಆ.9 ಏಕಾದಶಿ, ಆ.17 ಪ್ರಥಮ ಶ್ರಾವಣ ಸೋಮವಾರ ಪ್ರದೋಷ ಪೂಜೆ, ನಾಗಪಂಚಮಿ, ನವಚಂಡೀ ಹವನ, ಆ.20 ಅಷ್ಟಮಿ, ಆ.22 ಮಹಾರುದ್ರ ಅನುಷ್ಠಾನ ಪ್ರಾರಂಭ, ಆ.24 ಎರಡನೇ ಶ್ರಾವಣ ಸೋಮವಾರ ಮಹಾರುದ್ರ ಸಮಾಪ್ತಿ, ಪ್ರದೋಷ ಪೂಜಾ, ಆ.26 ಋುಗುಪಾಕರ್ಮ, ಆ.28 ವರಮಹಾಲಕ್ಷಿತ್ರ್ಮೕ ವ್ರತ, ಕುಂಕುಮಾರ್ಚನೆ ಪೂಜೆ, ಆ.31 ತೃತೀಯ ಶ್ರಾವಣ ಸೋಮವಾರ, ಲಘುರುದ್ರ ಸ್ವಾಹಾಕಾರ, ಪ್ರದೋಷ ಪೂಜೆ, ಸೆ.4 ಶ್ರೀಕೃಷ್ಣ ಜನ್ಮಾಷ್ಟಮಿ, ಸೆ.7 ನಾಲ್ಕನೇ ಶ್ರಾವಣ ಸೋಮವಾರ ಲಘುರುದ್ರ ಸ್ವಾಹಾಕಾರ, ಪ್ರದೋಷ ಪೂಜಾ, ಸೆ.14 ಶ್ರೀಗಣೇಶ ಚತುರ್ಥಿ, ಸೆ.15 ಋುಷಿ ಪಂಚಮಿ, ಸೆ.22 ಏಕಾದಶಿ, ಸೆ.25 ಅನಂತ ಚತುರ್ದಶಿ ಪೂಜೆ, ಸೆ.26 ಚಾತುಮಾಸ್ಯ ವ್ರತ ಸಮಾಪ್ತಿ, ಸೆ.27 ಗಣೇಶ ವಿಸರ್ಜನೆ ನಡೆಯಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಫೊಟೊ: 27ಎಚ್ ಎ ಕೈವಲ್ಯ