ಹಳಿಯಾಳ: ನೀಟ್ ನಲ್ಲಿ ಅತ್ಯುತ್ತಮ ರಾರ ಯಂಕಿಂಗ್ ನೊಂದಿಗೆ ಸಾಧನೆ ಮಾಡಿದ ಪ್ರೀತಮ್ ಚೌವ್ಹಾಣನನ್ನು ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ ಹಾಗೂ ವಿಮಲಾ ವಿ.ದೇಶಪಾಂಡೆ ಪ್ರೌಢಶಾಲೆ ಆಶ್ರಯದಲ್ಲಿಸನ್ಮಾನಿಸಲಾಯಿತು.
ಪ್ರೀತಮ್ ಚೌವ್ಹಾಣ 720ಕ್ಕೆ 598 ಅಂಕಗಳೊಂದಿಗೆ 4397ನೇ ರಾರ ಯಂಕಿಂಗ್ ಪಡೆದಿದ್ದಕ್ಕಾಗಿ ಈತ ಕಲಿತ ವಿಮಲಾ ವಿ.ದೇಶಪಾಂಡೆ ಪ್ರೌಢಶಾಲೆಯಲ್ಲಿಸನ್ಮಾನಿಸಲಾಯಿತು.ಶಾಲೆಯ ಪ್ರಾಚಾರ ್ಯ ಬಸವರಾಜ ಮಾತನಾಡಿ, ‘‘ದ್ವಿತೀಯ ಪಿಯುಸಿ ನಂತರ ತಾವು ಕಂಡ ವೈದ್ಯಕೀಯ ಕನಸನ್ನು ನನಸಾಗಿಸಿಕೊಳ್ಳಲು ನೀಟ್ ಪರೀಕ್ಷೆಯಲ್ಲಿಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆ ಹಾಗೂ ಪಾಲಕರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈತನ ಸಾಧನೆ, ಪರಿಶ್ರಮ ಹಾಗೂ ಉತ್ತಮ ನಡವಳಿಕೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ’’ ಎಂದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿ ಪ್ರೀತಮ್ ಚೌವ್ಹಾಣ‘‘ತಾನು ಕಲಿತ ಶಾಲೆಯ ಜೊತೆಗೆ ಅರ್ಜುನ ಕಾಲೇಜಿನಲ್ಲಿಕಳೆದ ದಿನಗಳು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ನೀಡಿದ ಸಹಕಾರ ಪ್ರೋತ್ಸಾಹ ಹಾಗೂ ಸಂಸ್ಥೆಯ ಉತ್ತಮ ವ್ಯವಸ್ಥೆ ತಂದೆ-ತಾಯಿ ಪ್ರೋತ್ಸಾಹ ಬೆಂಬಲದಿಂದ ಸಾಧನೆ ಸಾಧ್ಯವಾಯಿತು’’ ಎಂದರು.
ಈ ಸಂದರ್ಭದಲ್ಲಿಅರ್ಜುನ ಸಂಸ್ಥೆಯ ನಿರ್ದೇಶಕರು, ಪ್ರಾಚಾರ್ಯರು ಹಾಗೂ ವಿವಿಡಿ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.
27ವೈಎಲಪಿ5
ನೀಟ್ ಪರೀಕ್ಷೆಯಲ್ಲಿಅತ್ಯುತ್ತಮ ರಾರ ಯಂಕ್ ಗಳಿಸಿದ ಪ್ರೀತಮ್ ಚೌವ್ಹಾಣ ಅವರನ್ನು ವಿಮಲಾ ವಿ ದೇಶಪಾಂಡೆ ಪ್ರೌಢಶಾಲೆæಯಲ್ಲಿ ಸನ್ಮಾನಿಸಲಾಯಿತು.