ಎಸ್ . ಜಾನಕಿ ಬಹುಭಾಷಾ ಗಾಯಕಿ

Contributed byadarshkodi15@gmail.com|Vijaya Karnataka
celebrating s janakis melodies a tribute event
ಎಸ್ . ಜಾನಕಿ ಬಹುಭಾಷಾ ಗಾಯಕಿ

((ದೊಡ್ಡಬಳ್ಳಾಪುರ ಕನ್ನಡ ಜಾಗೃತ ಭವನದಲ್ಲಿನುಡಿ ನಮನ ಕಾರ್ಯಕ್ರಮ))
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ನಗರದ ಕನ್ನಡ ಜಾಗೃತ ಭವನದಲ್ಲಿಗಾಯಕಿ ದಿ.ಎಸ್ . ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಕನ್ನಡ ಜಾಗೃತ ಪರಿಷತ್ ಮತ್ತು ಸುಸ್ವರ ಟ್ರಸ್ಟ್ ಸಹಯೋಗದಲ್ಲಿನಡೆದ ನುಡಿ ನಮನ ಕಾರ್ಯಕ್ರಮದಲ್ಲಿಕನ್ನಡ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡಿ, ಎಸ್ .ಜಾನಕಿ ಅವರು ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿಹಾಡುಗಳನ್ನು ಹಾಡಿ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ ಎಂದರು

ಎಸ್ .ಜಾನಕಿ ಅವರು ಹಾಡಿರುವ ಭಕ್ತಿಗೀತೆ, ಭಾವಗೀತೆ, ಜಾನಪದ ಮತ್ತು ಚಿತ್ರಗೀತೆಗಳು ಕೇಳುಗರ ಮನಗೆದ್ದಿವೆ. ಎಲ್ಲಾಭಾವನೆಗಳನ್ನೂ ತಮ್ಮ ಧ್ವನಿಯಲ್ಲೇ ಅತ್ಯಂತ ಸುಂದರವಾಗಿ ಜೀವಂತಗೊಳಿಸುತ್ತಿದ್ದರು. ಚಿಕ್ಕ ಮಕ್ಕಳ ಧ್ವನಿಯನ್ನು ಅನುಕರಿಸಿ ಹಾಡುತ್ತಿದ್ದ ರೀತಿ. ಅನೇಕ ಚಿತ್ರಗಳಲ್ಲಿಅವರು ಹಾಡಿದ ತುಂಟಾಟದ ಮತ್ತು ಮಕ್ಕಳ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ ಎಂದರು.

ಕಾರ್ಯಕ್ರಮದಲ್ಲಿದೊಡ್ಡಬಳ್ಳಾಪುರ ತಾಲೂಕಿನ ಕಲಾವಿದರು ನಡೆಸಿಕೊಟ್ಟ ಎಸ್ .ಜಾನಕಿ ಹಾಡಿರುವ ಚಲನಚಿತ್ರಗಳ ಗಾಯನ ಗಮನಸೆಳೆಯಿತು. ಈ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ತ.ನ.ಪ್ರಭುದೇವ್ , ಸಂಜೀವ್ ನಾಯಕ್ , ಕನ್ನಡ ಜಾಗೃತ ಪರಿಷತ್ ಟ್ರಸ್ಟಿಗಳಾದ ಡಾ.ಎ.ಒ.ಆವಲಮೂರ್ತಿ, ಎಸ್ .ಮಹಾಬಲೇಶ್ವರ್ , ಕಾರ್ಯದರ್ಶಿ ಡಿ.ಪಿ.ಆಂಜನೇಯ, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ , ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ , ಗೌರವ ಕಾರ್ಯದರ್ಶಿ ಎ.ಜಯರಾಮ್ , ಕೋಶಾಧ್ಯಕ್ಷ ಜಿ.ಸುರೇಶ್ , ಕನ್ನಡಪರ ಸಂಘಟನೆಗಳ ಮುಖಂಡರಾದ ಡಿ.ವೆಂಕಟೇಶ್ , ನಾಗರಾಜ್ , ಬಿ.ಜಿ.ಅಮರನಾಥ್ , ಕನ್ನಡ ಜಾಗೃತ ಪರಿಷತ್ , ಕಸಾಪ, ಸುಸ್ವರ ಟ್ರಸ್ಟ್ ಪದಾಧಿಕಾರಿಗಳು ಮತ್ತು ಎಸ್ .ಜಾನಕಿ ಅಭಿಮಾನಿಗಳು ಭಾಗವಹಿಸಿದ್ದರು.

ಫೋಟೋ:1707ವಿಕೆ2: ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್ ಸಭಾಂಗಣದಲ್ಲಿಎಸ್ .ಜಾನಕಿ ನುಡಿ ನಮನ ಕಾರ್ಯಕ್ರಮ ನಡೆಯಿತು.