ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

Contributed byMruthyunjayar77@gmail.com|Vijaya Karnataka
free skill development training for scst candidates
ಚಿಕ್ಕಬಳ್ಳಾಪುರ: ಎಸ್ ಸಿ, ಎಸ್ ಟಿ ಯೋಜನೆಯಡಿ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 5ನೇ, 8ನೇ ಹಾಗೂ 10ನೇ ತರಗತಿಯಲ್ಲಿಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್ ಗಳಲ್ಲಿತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿಮಾಸಿಕ 2,000 ರೂ. ಸ್ಟೈಫಂಡ್ , ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಪಂಚತಾರಾ ಸೇರಿ ವಿವಿಧ ಹೋಟೆಲ್ ಗಳಲ್ಲಿಉದ್ಯೋಗಾವಕಾಶ ದೊರೆಯಲಿದೆ. 20ರಿಂದ 45 ವರ್ಷ ವಯಸ್ಸಿನ ಎಸ್ ಸಿ, ಎಸ್ ಟಿ ಅಭ್ಯರ್ಥಿಗಳು ಜು.27ರ ಸಂಜೆ 5.30ರೊಳಗೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ಇಲ್ಲಿಅರ್ಜಿ ಸಲ್ಲಿಸಬಹುದು.