ವಿಕ ಸುದ್ದಿಲೋಕ ಮಾಲೂರುತಾಲೂಕಿನ ತೋರ್ನಹಳ್ಳಿ ಗ್ರಾಮದ ಕೆರೆಯಲ್ಲಿಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪಂಪು ಮೋಟಾರ್ ಅಳವಡಿಸಿ ತೊಟಗಳಿಗೆ ನೀರು ಹರಿಸುತ್ತಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಸಿ.ಆರ್ .ಗೌಡ ಅವರಿಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಪಂಪ್ ಮೋಟಾರ್ , ಕೇಬಲ್ ವೈರ್ , ಪೈಪುಗಳನ್ನು ಗ್ರಾಮ ಪಂಚಾಯಿತಿಕ್ಕೆ ವಶಕ್ಕೆ ಪಡೆದು ಕೆರೆಯ ನೀರು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನಲ್ಲಿಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಕೆರೆಗಳಲ್ಲಿನ ನೀರು ಜಾನುವಾರುಗಳು ಕುಡಿಯಲು ಬಳಸುವ ಅಗತ್ಯವಿರುವುದರಿಂದ ಯಾರೇ ಆಗಲಿ ಅಕ್ರಮವಾಗಿ ಕೆರೆಯ ನೀರನ್ನು ಬಳಸಿಕೊಳ್ಳಬಾರದು. ಇಲ್ಲಿನ ತೋರ್ನಹಳ್ಳಿ ಗ್ರಾಪಂ. ವ್ಯಾಪ್ತಿಯ ತೊರ್ನಹಳ್ಳಿ ಗ್ರಾಮದ ಕೆರೆಯಲ್ಲಿಖಾಸಗಿ ವ್ಯಕ್ತಿಗಳು ಕೆರೆಯಲ್ಲಿರುವ ನೀರಿಗೆ ಪಂಪ್ ಮೋಟರ್ ಅಳವಡಿಸಿ ತೋಟಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೊರೆತ ಮಾಹಿತಿ ಮೇರೆಗೆ ಕೆರೆಯ ಅಂಗಳಕ್ಕೆ ಭೇಟಿ ನೀಡಿ ವೀಕ್ಷಿಸಿ ಕೇಬಲ್ ವೈರ್ , ಮೋಟಾರ್ ಹಾಗೂ ಪೈಪ್ ಗಳನ್ನು ಗ್ರಾಮ ಪಂಚಾಯಿತಿ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಆರ್ .ಗೌಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಕೆರೆಗಳಲ್ಲಿನ ನೀರು ಯಾರು ಬಳಸಿಕೊಳ್ಳಬಾರದು. ಜಾನುವಾರುಗಳು ಕುಡಿಯಲು ನೀರನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಯಾರೇ ಆಗಲಿ ಅಕ್ರಮವಾಗಿ ಕೆರೆ ನೀರನ್ನು ಬಳಸಿಕೊಂಡಲ್ಲಿಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಪಂ ಪಂಚಾಯಿತಿ ಎಸ್ ಡಿಎ ನಾಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.
17 ಮಾಲೂರು ಪೋಟೊ 2. ತೋರ್ನಹಳ್ಳಿ ಗ್ರಾಮದ ಕೆರೆಯಲ್ಲಿಅಕ್ರಮವಾಗಿ ಅಳವಡಿಸಿದ್ದ ಪಂಪ್ ಮೋಟಾರ್ ಅನ್ನು ಗ್ರಾಪಂ ಪಿಡಿಒ ಸಿ.ಆರ್ .ಗೌಡ ವಶಕ್ಕೆ ಪಡೆದರು.