ಪಿಎಸ್ ಐ ಮಂಜುನಾಥ್ ನಿಧನ

Contributed bygururaja.jd@gmail.com|Vijaya Karnataka
psi manjunath passes away due to heart attack in vinobhanagar
ಪಿಎಸ್ ಐ ಮಂಜುನಾಥ್ ನಿಧನ

ಶಿವಮೊಗ್ಗ : ವಿನೋಬನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎನ್ . ಮಂಜುನಾಥ್ (55) ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಇದ್ದಾರೆ.
ಪಾರ್ಥಿವ ಶರೀರವನ್ನು ವಿನೋಬನಗರದ ನರಸಿಂಹ ಬಡಾವಣೆಯ ಸ್ವಗೃಹದಲ್ಲಿಅಂತಿಮ ದರ್ಶನಕ್ಕೆ ಇರಿಸಲಾಯಿತು. ಶರಾವತಿ ನಗರದ ರುದ್ರಭೂಮಿಯಲ್ಲಿಗುರುವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಂಜುನಾಥ್ ಅವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ಶಿವಮೊಗ್ಗದಿಂದ ಮಣಿಪಾಲ ಆಸ್ಪತ್ರೆಗೆ ವಾಹನದಲ್ಲಿತೆರಳುತ್ತಿದ್ದ ವೇಳೆ ಗಾಜನೂರು ಬಳಿ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಮರಳಿ ಕರೆತಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.

ಮಂಜುನಾಥ್ ಮೂಲತಃ ತುಮಕೂರು ಜಿಲ್ಲೆಹಾರನಹಳ್ಳಿ ಗ್ರಾಮದವರು. ಹಲವು ವರ್ಷಗಳಿಂದ ಇಲ್ಲಿನ ವಿನೋಬನಗರದಲ್ಲಿನೆಲೆಸಿದ್ದರು. 1992ರ ಬ್ಯಾಚ್ ನಲ್ಲಿಕಾನ್ಸ್ ಟೆಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ಅವರು, ತಮ್ಮ ಸೇವಾವಧಿಯಲ್ಲಿಹೆಡ್ ಕಾನ್ಸ್ ಟೆಬಲ್ , ಎಎಸ್ ಐ ಹುದ್ದೆಗಳನ್ನು ನಿರ್ವಹಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಬಡ್ತಿ ಹೊಂದಿ ವಿನೋಬನಗರ ಠಾಣೆಯಲ್ಲಿಪಿಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಜುನಾಥ್ ನಿಧನಕ್ಕೆ ಜಿಲ್ಲಾಪೊಲೀಸ್ ಇಲಾಖೆ ಹಾಗೂ ವಿನೋಬನಗರ ಠಾಣೆ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

=====

22ಎಸ್ ಎಂಜಿಗುರು3