ಕೋತಿಗಳ ಹಾವಳಿಗೆ ಬೆಳೆ ನಾಶ

Contributed byabhilash.gowda7707@gmail.com|Vijaya Karnataka
monkey attacks farmers face crop destruction
ವಿಕ ಸುದ್ದಿಲೋಕ ಹನೂರು

ಕೋತಿಗಳ ಹಾವಳಿಯಿಂದ ಅರಿಶಿಣ ಬೆಳೆ ನಾಶವಾಗುತ್ತಿದ್ದು, ರೈತರು ಕಂಗಲಾಗಿದ್ದಾರೆ
ತಾಲೂಕಿನ ವಡೆಕಹಳ್ಳ ಗ್ರಾಮದಲ್ಲಿಕಾಡಿನಿಂದ ಗುಂಪು-ಗುಂಪಾಗಿ ಬರುತ್ತಿರುವ ಕೋತಿಗಳು, ಜಮೀನಲ್ಲಿಬೆಳೆದಿರುವ ಅರಿಶಿಣ ಮೊಳಕೆಗಳನ್ನು ಕಿತ್ತು ತಿನ್ನುವುದರ ಜತೆಗೆ ತುಳಿದು ನಾಶ ಪಡಿಸುತ್ತಿದ್ದು,ರೈತರಲ್ಲಿಆತಂಕ ಹೆಚ್ಚಾಗಿದೆ.

ಈಗಾಗಲೇ ಸಕಾಲದಲ್ಲಿಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಈ ಸಂದರ್ಭದಲ್ಲಿಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಅದರಲ್ಲೂಕೋತಿಗಳ ದಾಳಿಯಿಂದ ಅರಿಶಿಣ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗುತ್ತಿದೆ. ಹಗಲು ವೇಳೆಯಲ್ಲೇ ಜಮೀನಿಗೆ ಲಗ್ಗೆಯಿಡುವ ಕೋತಿಗಳನ್ನು ಓಡಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಆದರೂ ಅವು ಮತ್ತೆ ಮತ್ತೆ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ

ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಕೋತಿಗಳನ್ನು ಕಾಡಿನೊಳಗೆ ಸ್ಥಳಾಂತರಿಸುವುದು ಹಾಗೂ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಡೆಕಹಳ್ಳ ಗ್ರಾಮದ ರೈತರು ಆಗ್ರಹಿಸಿದ್ದಾರೆ.

25ಅಊಓಊಓಖ01

ಪೋಟೊ:01

ಹನೂರು: ತಾಲೂಕಿನ ವಡೆಕಹಳ್ಳ ಗ್ರಾಮದಲ್ಲಿಕಾಡಿನಿಂದ ಗುಂಪು-ಗುಂಪಾಗಿ ಬರುತ್ತಿರುವ ಕೋತಿಗಳ ಹಾವಳಿಯಿಂದ ಬೆಳೆ ನಾಶವಾಗಿರುವುದು.