ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

Contributed byrathodjayakumar92@gmail.com|Vijaya Karnataka
demand farmers association coordinated with the district officer to supply water to canals
ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

ರೈತರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ |
ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)

ಇಲ್ಲಿನ ರಾಯ ಬಸವಣ್ಣ ಮತ್ತು ತುರ್ತಾ ಕಾಲುವೆಗಳಿಗೆ ಕೃಷಿ ಚಟುವಟಿಕೆ ನಡೆಸಲು ನೀರು ಹರಿಸುವುದನ್ನು ನಿಲ್ಲಿಸಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಹೊಸಪೇಟೆ ರೈತರ ಸಂಘದಿಂದ ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಮುನಿರಾಬಾದ್ ಅಧೀಕ್ಷಕ ಅಭಿಯಂತರರ ವರದಿಯ ಮೇರೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಈ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲು ಆದೇಶಿಸಿರುವುದು ಅವೈಜ್ಞಾನಿಕವಾಗಿದೆ. ಈ ಕಾಲುವೆಗಳಿಗೆ ವರ್ಷಗಳ ಇತಿಹಾಸವಿದ್ದು, ನೀರಿಲ್ಲದ ಕಾರಣ ಪ್ರಸ್ತುತ ಬಾಳೆ, ಕಬ್ಬು ಮತ್ತು ತೋಟಗಾರಿಕೆ ಬೆಳೆಗಳು ಹಾಳಾಗುತ್ತಿವೆ. ಹೀಗಾಗಿ, ಶೀಘ್ರ ನೀರು ಹರಿಸಬೇಕು,’’ ಎಂದು ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.

ಕಟಿಗಿ ಜಂಬಯ್ಯ ನಾಯಕ, ಗೋಸಲ್ ಭರಮಪ್ಪ, ರಾಮಕೃಷ್ಣ, ಎ.ಪರಸಪ್ಪ, ಉತ್ತಂಗಿ ಕೊಟ್ರೇಶ್ , ಯಲ್ಲಪ್ಪ, ಅಂಜಿನಪ್ಪ, ವೆಂಕೋಬಪ್ಪ, ನಿಜಲಿಂಗಪ್ಪ ಸೇರಿ ಇತರರಿದ್ದರು.

ಫೋಟೋ ಕ್ಯಾಪ್ಷನ್ : 22ಜಯಪ್ಪ6

ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೊಸಪೇಟೆ ರೈತರ ಸಂಘದಿಂದ ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.