ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡನೀಯ

Contributed byrathodjayakumar92@gmail.com|Vijaya Karnataka
attack on students aidso protest
ವಿದ್ಯಾರ್ಥಿಗಳ ಮೇಲಿನ ಲಾಠಿ ಚಾಜ್ ರ್ ಗೆ ಖಂಡನೆ

ಎಐಡಿಎಸ್ ಒ ಜಿಲ್ಲಾಸಮಿತಿಯಿಂದ ಪ್ರತಿಭಟನೆ |
ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)

ನೀಟ್ ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರ ವಿರೋಧಿಸಿ ದಿಲ್ಲಿಯಲ್ಲಿಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಚಾಜ್ ರ್ ಖಂಡಿಸಿ ಎಐಡಿಎಸ್ ಒ ಜಿಲ್ಲಾಸಮಿತಿಯಿಂದ ಬುಧವಾರ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟಿಸಲಾಯಿತು.

ಸಂಘಟನೆ ಜಿಲ್ಲಾಧ್ಯಕ್ಷ ಜೆ.ಪಿ.ರವಿಕಿರಣ್ ಮಾತನಾಡಿ, ‘‘ವೈದ್ಯರಾಗಿ ದೇಶ ಸೇವೆ ಮಾಡುವ ಕನಸು ಹೊತ್ತು ಕಷ್ಟಪಟ್ಟು ಓದುವ ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜತೆ ಕೋಚಿಂಗ್ ಮಾಫಿಯಾ ಮತ್ತು ಎನ್ ಟಿಎ ಚೆಲ್ಲಾಟವಾಡುತ್ತಿದೆ. ಪರೀಕ್ಷಾ ವ್ಯವಸ್ಥೆಯು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜಾಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾಜ್ ರ್ ಮಾಡಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಕುಸಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರ ಕೂಡಲೇ ಎಚ್ಚೆತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆನಡೆಸಿರುವವರ ವಿರುದ್ಧ ಕ್ರಮವಹಿಸಬೇಕು. ಭ್ರಷ್ಟಾಚಾರದ ಕೂಪವಾಗಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಅನ್ನು ರದ್ದುಗೊಳಿಸಬೇಕು. ಘಟನೆ ಸಂಬಂಧ ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,’’ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು. ಸಂಘಟನೆ ಜಿಲ್ಲಾಕಾರ್ಯದರ್ಶಿ ಯು.ಉಮಾದೇವಿ, ವಿದ್ಯಾರ್ಥಿಗಳಾದ ವೈಷ್ಣವಿ, ಸೈಯ್ಯದ್ ಸಮೀರ್ , ಮೀನಾಕ್ಷಿ, ನಿರ್ಮಲಾ ಶ್ರೀನಿವಾಸ್ , ಹುಲಿಗೆಮ್ಮ, ವಿದ್ಯಾಶ್ರೀ ಸೇರಿದಂತೆ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಫೋಟೋ ಕ್ಯಾಪ್ಷನ್ : 22ಜಯಪ್ಪ04

ದಿಲ್ಲಿಯಲ್ಲಿವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾಜ್ ರ್ ಖಂಡಿಸಿ ಹೊಸಪೇಟೆಯ ತಾಲೂಕು ಕಚೇರಿ ಎದುರು ಎಐಡಿಎಸ್ ಒ ಸಂಘಟನೆಯ ನೇತೃತ್ವದಲ್ಲಿವಿದ್ಯಾರ್ಥಿಗಳು ಪ್ರತಿಭಟಿಸಿದರು.