6617 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶವಿಕ ಸುದ್ದಿಲೋಕ ಮುಧೋಳ
ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿಖಾಲಿ ಇರುವ ಹುದ್ದೆಗಳಿಗೆ 6617 ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರ ಮುಂದಾಗಿದೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಶಾಲೆಗಳು ಆರಂಭವಾಗಿ ಎರಡು ತಿಂಗಳು ಗತಿಸುತ್ತ ಬಂದಿದ್ದರೂ ಹಲವು ಕಡೆ ಶಿಕ್ಷಕರ ಕೊರತೆ ಕಾಡುತ್ತಿತ್ತು.
ಕಾಯಂ ಶಿಕ್ಷಕರ ನೇಮಕ ಪ್ರಕ್ರಿಯೆ ವಿಳಂಬವಾದರೂ ಅತಿಥಿ ಶಿಕ್ಷಕರನ್ನಾದರೂ ನೇಮಕ ಮಾಡಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಮತ್ತು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿತ್ತು. ಸದ್ಯ ಆದೇಶ ಜಾರಿಯಾಗಿದ್ದು, ಕೆಲ ದಿನಗಳಲ್ಲಿಅತಿಥಿ ಶಿಕ್ಷಕರ ಎರಡನೇ ಹಂತದ ನೇಮಕ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.
ವಿಜಯ ಕರ್ನಾಟಕದಲ್ಲಿಆ.6 ರಂದು ‘ಅತಿಥಿ ಶಿಕ್ಷಕರ ಭರ್ತಿಗೂ ಹಿಂದೇಟು’ ಶೀರ್ಷಿಕೆಯಡಿ ವಿಶೇಷ ಹಾಗೂ ಸಮಗ್ರ ವರದಿ ಪ್ರಕಟಿಸಿ ಗಮನಸೆಳೆಯಲಾಗಿತ್ತು.