Direct Recruitment At Harihar City Council Applications Invited For 4 Civic Worker Positions
ಚೂರು ಸುದ್ದಿ 01
Contributed by: Vinayaka Naik P|Vijaya Karnataka•
ಪೌರಾಕಾರ್ಮಿಕರ ನೇರ ನೇಮಕಾತಿ
ದಾವಣಗೆರೆ: ಹರಿಹರ ನಗರಸಭೆ ಗೆ 4 ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಹರಿಹರ ನಗರಸಭೆ ಕಚೇರಿಗೆ ಆಗಸ್ಟ್ 13 ರೊಳಗಾಗಿ ಸಲ್ಲಿಸಬೇಕು. ಮಾಹಿತಿಗಾಗಿ ಜಿಲ್ಲಾನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಧಿಕೃತ ವೆಬ್ ಸೈಟ್ ಘ್ಕಿ hಠಿಠಿp://dava್ಞaಜಛ್ಟಿಛಿd್ಠd್ಚ.ಞ್ಟ್ಚ.ಜಟv.ಜ್ಞಿ ಹಾಗೂ ಹರಿಹರ ನಗರಸಭೆ ಕಾರ್ಯಾಲಯ ಅಧಿಕೃತ ವೆಬ್ ಸೈಟ್ ಘ್ಕಿkಣಣಠಿ://hಠಿಠಿp://ಡಿಡಿಡಿ.ha್ಟಜಿha್ಟ್ಚಜಿಠಿy.ಞ್ಟ್ಚ.ಜಟv.ಜ್ಞಿ ಸಂಪರ್ಕಿಸಬಹುದು ಎಂದು ಯೋಜನಾ ನಿರ್ದೇಶಕ ಜಿ.ಟಿ. ವೀರೇಶ್ ಕುಮಾರ್ ತಿಳಿಸಿದ್ದಾರೆ.-------
ಫೋಟೋಗ್ರಫಿ ತರಬೇತಿಗೆ ಅರ್ಜಿ
ದಾವಣಗೆರೆ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ(ರಿ) ಹಳಿಯಾಳ ತರಬೇತಿ ಸಂಸ್ಥೆಯಲ್ಲಿಗ್ರಾಮೀಣ ಭಾಗದ ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ31 ದಿನಗಳ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ 18 ರಿಂದ 50 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ವಿವರಗಳನ್ನು ನೋಂದಾಯಿಸಬಹುದು. ಮಾಹಿತಿಗಾಗಿ ಮೊ: 9483485489, 8970145354 ಸಿಬಿಡಿ ಆರ್ ಸೆಟಿ ಹಳಿಯಾಳ ವಾಟ್ಸಾಪ್ ಚಾನಲ್ ನಲ್ಲಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
-----
ತಂಬಾಕು ದಾಳಿ: ದಂಡ ವಸೂಲಿ
ದಾವಣಗೆರೆ: ಜಿಲ್ಲಾಡಳಿತ, ಜಿಪಂ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾತಂಬಾಕು ನಿಯಂತ್ರಣ ಕೋಶ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಠಾಣೆ ಸವಳಂಗ ವತಿಯಿಂದ ಸವಳಂಗ ಗ್ರಾಮದಲ್ಲಿಸೆಕ್ಷನ್ 4ರಡಿಯಲ್ಲಿ10 ಪ್ರಕರಣ ದಾಖಲಿಸಿ 2800 ರೂ. ಮತ್ತು ಸೆಕ್ಷನ್ 6ಬಿ ಅಡಿಯಲ್ಲಿ2 ಪ್ರಕರಣ ದಾಖಲಿಸಿ 400 ರೂ. ಸೇರಿ ಒಟ್ಟು 12 ಪ್ರಕರಣ ದಾಖಲಿಸಿ 3200 ರೂ. ದಂಡ ವಿಧಿಸಲಾಯಿತು.ಈ ವೇಳೇ ಜಿಲ್ಲಾತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಮಾತನಾಡಿ, ‘‘ತಂಬಾಕು ಉತ್ಪನ್ನಗಳ ಸರಕು ವ್ಯಾಪಾರಸ್ಥರು ಕಡ್ಡಾಯವಾಗಿ ತಂಬಾಕಿನ ಉತ್ಪನ್ನಗಳ ಮೇಲೆ ಬಿಲ್ ಪಡೆಯಬೇಕು. ಒಂದು ವೇಳೆ ಬಿಲ್ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿಸೂಕ್ತ ಕ್ರಮ ಕೈಗೊಳ್ಳಲಾಗುವುದು’’ ಎಂದು ಎಚ್ಚರಿಸಿದರು.
ದಾಳಿ ವೇಳೆ ಪಿಡಿಒ ವೇದಾವತಿ, ಎಎಸ್ ಐ ಮಲ್ಲೇಶಪ್ಪ, ಸಾಮಾಜಿಕ ಕಾರ್ಯಕರ್ತೆ ಶೈಲಾ, ಕಾರ್ಯದರ್ಶಿ ಅಂಜು ನಾಯ್ ್ಕ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ನಾಯ್ ್ಕ, ಪೊಲೀಸ್ ಸಿಬ್ಬಂದಿ ಪ್ರಶಾಂತ್ ಇದ್ದರು.