ಪೇಪರ್ ಬ್ಯಾಗ್ ತಯಾರಿಕೆ ತರಬೇತಿ

Contributed byvkumarphotos1@gmail.com|Vijaya Karnataka
successful paper bag making training program 35 students participated
ಕಾಸರಗೋಡು: ವಿದ್ಯಾನಗರ ಪ್ರೌಢಶಾಲೆಯ ಲಯನ್ಸ್ ಕ್ಲಬ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಪೇಪರ್ ಬ್ಯಾಗ್ ತಯಾರಿಕೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು.

ನಾನಾ ಶಾಲೆಗಳ 35 ಮಕ್ಕಳು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಶಿಕ್ಷಕ ಡಾ. ಎ. ಎನ್ . ಮನೋಹರನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಕೆ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಕಾರ್ಯದರ್ಶಿ ಪದ್ಮನಾಭನ್ ಸಿ. ಸ್ವಾಗತಿಸಿದರು. ಕ್ಲಬ್ ಖಜಾಂಚಿ ಟಿ.ವಿ. ವಿನೋದ್ ಕುಮಾರ್ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ಪಿ.ಟಿ. ಬೆನ್ನಿ ಮಕ್ಕಳಿಗೆ ಪೇಪರ್ ಬ್ಯಾಗ್ ತಯಾರಿಕೆಯನ್ನು ಪರಿಚಯಿಸಿದರು. ಕ್ಲಬ್ ಸದಸ್ಯರಾದ ಪಿ.ಕೆ. ಪ್ರಕಾಶ್ ಕುಮಾರ್ , ಮಧು ಕೆ., ಎಂ.ಎ. ನಾಸರ್ , ನ್ಯಾಯವಾದಿ ಉಣ್ಣಿಕೃಷ್ಣನ್ , ಸುಲೇಖಾ ಮಾಹಿನ್ ಮತ್ತು ಇತರರು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.

ಚಿತ್ರ: 22ಕೆಎಸ್ ಲಯನ್ಸ್