ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ

Contributed byrahulgowdaak@gmail.com|Vijaya Karnataka
congress workers meeting in banakal consensus for elections with unity
ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ

ವಿಕ ಸುದ್ದಿಲೋಕ ಬಣಕಲ್
ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ. ಎಲ್ಲಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದರು.

ಬಣಕಲ್ ಹೋಬಳಿ ಕಾಂಗ್ರೆಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿಮಾತನಾಡಿದ ಅವರು, ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾಪಂಚಾಯಿತಿ ಚುನಾವಣೆಗಳನ್ನು ಸಂಘಟಿತವಾಗಿ ಎದುರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಸರಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಣಕಲ್ ಹೋಬಳಿಯಲ್ಲಿಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂಬರುವ ಚುನಾವಣೆಗಳಲ್ಲಿಉತ್ತಮ ಫಲಿತಾಂಶ ಪಡೆಯಬಹುದು ಎಂದರು.

250ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು. ಎಸ್ ಐಆರ್ ಕುರಿತು ಮಾಹಿತಿ ನೀಡಲಾಯಿತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾಗಿ ಜಯರಾಮ್ ಗೌಡ ಅವರನ್ನು ಮರು ನೇಮಕ ಮಾಡುವುದು ಹಾಗೂ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಅವರನ್ನು ಮುಂದುವರಿಸಬೇಕು ಎಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಗೌಡ, ಹಿರಿಯ ಮುಖಂಡ ಎಂ.ಪಿ. ಮನುಗೌಡ, ಕೆಂಜಿಗೆ ವಿನಯ್ ಗೌಡ, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಇರ್ಫಾನ್ , ವಿನಯ್ ಕುಮಾರ್ , ಎಂ.ಎಸ್ .ಅನಂತ, ಬಿ.ಎ. ಉಮರ್ , ಸಿ.ಕೆ.ಇಬ್ರಾಹಿಂ, ಕುಂದೂರು ಸುಂದರೇಶ್ ಗೌಡ, ಹೊಸಳ್ಳಿ ಮಾಧವ್ ಗೌಡ, ಹೊಸಳ್ಳಿ ಚಂದ್ರೇಗೌಡ, ಚಕ್ಮಕ್ಕಿ ಎ.ಸಿ.ಅಯೂಬ್ , ತರುವೆ ರಾಮಚಂದ್ರ ಗೌಡ, ಕೊಟ್ಟಿಗೆಹಾರ ಅಜೀಜ್ , ದಿಲ್ದಾರ್ ಬೇಗಂ, ಮರುಗುಂದ ಪ್ರಸನ್ನ, ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಹಾಗೂ ಇತರರಿದ್ದರು.