ರುದ್ರಭೂಮಿ ಅತಿಕ್ರಮಣ ತಡೆಯಿರಿ

Contributed bynagendrappa976@gmail.com|Vijaya Karnataka
rudra bhoomi encroachment call for legal action
ರುದ್ರಭೂಮಿ ಅತಿಕ್ರಮಣ ತಡೆಯಿರಿ

ವಿಕ ಸುದ್ದಿಲೋಕ ಹರಪನಹಳ್ಳಿ
ನಗರದ ಸಾರ್ವಜನಿಕ ರುದ್ರಭೂಮಿ ಅತಿಕ್ರಮಣ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಒತ್ತಾ ಯಿಸಿ ವೀರಶೈವ ಲಿಂಗಾಯತ ರುದ್ರಭೂಮಿ ಸೇವಾ ಸಮಿತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿಮಂಗಳವಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ ಮುಖಂಡರು, ನಗರದ ಸ್ಮಶಾನಕ್ಕಾಗಿ ನಿಚ್ಚಾಪುರ ಗ್ರಾಮದ ಸರ್ವೆ ನಂ. 115/ಬಿ ರ ವಿಸ್ತೀರ್ಣ 3.18 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯಿದೆ 1964 ಕಲಂ 71ರ ಅಡಿ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು 11.06.2025ರಂದು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಸ್ಮಶಾನ ಭೂಮಿಯನ್ನು ಭೂಗಳ್ಳರು ಆತಿಕ್ರಮಣ ಮಾಡುತ್ತಿದ್ದು,ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ರುದ್ರಭೂಮಿ ಸೇವಾ ಸಮಿತಿ ಮುಖಂಡರಾದ ಕೌಟಿ ವಾಗೀಶ್ , ಎಚ್ .ಎಂ.ಕೊಟ್ರಯ್ಯ, ಮಟ್ಟಿ ಮಲ್ಲಿಕಾರ್ಜುನ, ಎಚ್ .ಎಂ. ಜಗದೀಶ್ , ಎಂ.ಶಿವಕುಮಾರ್ , ಸಂಗಮೇಶ್ ಕಡೆಮನಿ, ದವಾಡಿ ಬಸವರಾಜ್ , ಲಿಂಗನಗೌಡ ಇತರರು ಇದ್ದರು.

21,ಹೆಚ್ .ಆರ್ .ಪಿ.03: ಸ್ಮಶಾನ ಭೂಮಿ ಆತಿಕ್ರಮಣ ಮಾಡುತ್ತಿರುವ ಭೂಗಳ್ಳರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.