ಬಾಟಂ- ನೀಟ್ ಪ್ಯಾಕೇಜ್ - ಮುದಗಲ್ - ಪ್ರಧಾನ್ ರಾಜೀನಾಮೆಗೆ ಒತ್ತಾಯ

Contributed bydnkodihal@gmail.com|Vijaya Karnataka
neet exam malpractice youth leaders petition against government
ಪ್ರಧಾನ್ ರಾಜೀನಾಮೆಗೆ ಒತ್ತಾಯ

ಮುದಗಲ್ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿನ ಅಕ್ರಮ ತಡೆಗಟ್ಟಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿಫಲರಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು,’’ ಎಂದು ಒತ್ತಾಯಿಸಿ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಪದಾಧಿಕಾರಿಗಳು ಉಪ ತಹಸೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು. ‘‘ಪರೀಕ್ಷಾ ಅಕ್ರಮ, ಭ್ರಷ್ಟಾಚಾರ, ನಿರ್ಲಕ್ಷ್ಯ ಅಥವಾ ಪರೀಕ್ಷೆಯ ಗೌಪ್ಯತೆ ಕಾಪಾಡುವಲ್ಲಿವಿಫಲರಾದ ಕೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಫಾರೂಕ್ ಕಲಾಂ, ಅಮನ್ ಶೇಖ್ , ಯಾಕೂಬ್ , ರೆಹಮಾನ್ ಮೌಲಾನಾ, ಮಂಜೂರ ಮೇಸ್ತ್ರಿ, ಖಾಸಿಂ, ಆಸೀಫ್ ಇತರರಿದ್ದರು.
---

ಆರ್ ಸಿಎಚ್ 22ಮುದಗಲ್ 03:

ಮುದಗಲ್ ನಲ್ಲಿಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಪದಾಧಿಕಾರಿಗಳು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಉಪ ತಹಸೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.