ವಿದ್ಯುತ್ ವ್ಯತ್ಯಯ 26ರಂದು

Contributed byMruthyunjayar77@gmail.com|Vijaya Karnataka
mitteemari power outage electricity will be cut from 10 am to 5 pm on 26th
ಚಿಕ್ಕಬಳ್ಳಾಪುರ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವತಿಯಿಂದ ಮಿಟ್ಟೇಮರಿ 220/66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿಜು.26ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ ಉಂಟಾಗಲಿದೆ.

ಮಿಟ್ಟೇಮರಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಪೆರೇಸಂದ್ರ, ಮಂಡಿಕಲ್ , ಸೋಮೇನಹಳ್ಳಿ, ಬಾಗೇಪಲ್ಲಿ, ಸಾದಲಿ, ಮಿಟ್ಟೇಮರಿ, ತಿಮ್ಮಂಪಲ್ಲಿ, ಸೋಮನಾಥಪುರ, ಚೇಳೂರು, ಪಾತಪಾಳ್ಯ, ಚಾಕವೇಲು, ಗೂಳೂರು ಹಾಗೂ ಜೂಲಪಾಳ್ಯ 66/11 ಕೆ.ವಿ. ಉಪ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿಈ ಅವಧಿಯಲ್ಲಿವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಆದ್ದರಿಂದ ಸಂಬಂಧಿತ ಪ್ರದೇಶಗಳ ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಬಳ್ಳಾಪುರ ಬೆಸ್ಕಾಂನ ಇಇ ರಮೇಶ್ ಕುಮಾರ್ ಪ್ರಕಟಣೆಯಲ್ಲಿಮನವಿ ಮಾಡಿದ್ದಾರೆ.