ರೈತರ ಸಮಸ್ಯೆಗೆ ಸ್ಪಂದಿಸಿ

Contributed byshreekanta.akki@timesofindia.com|Vijaya Karnataka
farmers struggles in koppal legislators indifference
‘ರೈತರ ಸಮಸ್ಯೆಗೆ ಸ್ಪಂದಿಸಿ’

ಕೊಪ್ಪಳ: ‘‘ಭೀಕರ ಬರಗಾಲಕ್ಕೆ ತುತ್ತಾಗಿ ತಾಲೂಕಿನ ರೈತರು ಗುಳೆ ಹೋಗುತ್ತಿರುವ ಸಂದರ್ಭದಲ್ಲಿಕೊಪ್ಪಳದ ಶಾಸಕರು ಕ್ಷೇತ್ರದಲ್ಲಿನಾಪತ್ತೆಯಾಗಿ ಮಂತ್ರಿ ಆಗಲು ದಿಲ್ಲಿಯಲ್ಲಿಬೀಡು ಬಿಟ್ಟಿರುವುದು ಅಕ್ಷಮ್ಯ,’’ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಆರೋಪಿಸಿದ್ದಾರೆ.
‘‘ತಾಲೂಕಿನಲ್ಲಿಶೇ.40ರಷ್ಟು ರೈತರು ಬಿತ್ತನೆ ಮಾಡಿಲ್ಲ. ಬಿತ್ತನೆ ಮಾಡಿರುವ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇಂತಹ ಸಂದರ್ಭದಲ್ಲಿಕ್ಷೇತ್ರದಲ್ಲಿಇದ್ದು ಬರ ಪರಿಹಾರ ಕಾಮಗಾರಿಗಳ ಕಾರ್ಯಕ್ಕೆ ವೇಗ ನೀಡುವ ಕೆಲಸ ಮಾಡುವುದು ಶಾಸಕರ ಜವಾಬ್ದಾರಿ. ಆದರೆ, ಜನರ ಸಮಸ್ಯೆಗಳಿಗಿಂತ ಅಧಿಕಾರವೇ ಇವರಿಗೆ ಮುಖ್ಯವಾಗಿದೆಯೇ? ಕೊಪ್ಪಳದಲ್ಲಿಕಾರ್ಖಾನೆಗಳು ಬೇಡ ಎಂದು ಜನತೆ ವರ್ಷದಿಂದ ಪ್ರತಿಭಟನೆ ಆರಂಭಿಸಿ ಬೀದಿಗಿಳಿದಿದ್ದಾರೆ. ಕೃಷಿಗೆ ತುಂಗಭದ್ರಾ ನದಿ ನೀರು ಹರಿಸಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ನಾಯಕರೊಂದಿಗೆ ದಿಲ್ಲಿಯಲ್ಲಿಪ್ರತಿಭಟನೆಯಲ್ಲಿಪಾಲ್ಗೊಳ್ಳಲು ಸಮಯ ಇರುವ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ತಮ್ಮ ಕ್ಷೇತ್ರದ ಜನರ ಪ್ರತಿಭಟನೆ ಗಮನಿಸಲು ಸಮಯ ಇಲ್ಲವೇ,’’ ಎಂದು ಪತ್ರಿಕಾ ಪ್ರಕಟಣೆಯಲ್ಲಿಪ್ರಶ್ನಿಸಿದ್ದಾರೆ.