*ಕುಂಭಾಸಿ: ದಂತ ಪಂಕ್ತಿ ಜೋಡಣಾ ಶಿಬಿರ ಉದ್ಘಾಟನೆ

Contributed byaishwaryabeejadi@gmail.com|Vijaya Karnataka
inauguration of dental alignment camp in kumbhasi
ವಿಕ ಸುದ್ದಿಲೋಕ ಕುಂಭಾಸಿ

ಅಂತಾರಾಷ್ಟ್ರೀಯ ರೋಟರಿಯು ಅದ್ಯತಾ ಕ್ಷೇತ್ರಗಳಲ್ಲಿಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ದಂತ ಆರೋಗ್ಯ ಕ್ಷೇತ್ರದಲ್ಲಿರೋಟರಿ ಕ್ಲಬ್ ಕೋಟೇಶ್ವರ ನೀಡಿದ ಕೊಡುಗೆ ಅಮೂಲ್ಯವಾದುದು. ಪ್ರತಿ ವರ್ಷ ನೂರಾರು ಫಲಾನುಭವಿಗಳಿಗೆ ದಂತ ಪಂಕ್ತಿ ಜೋಡಣೆಯ ಶಿಬಿರಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ ಎಂದು ರೋಟರಿ ಜಿಲ್ಲೆ3182ರ ಜಿಲ್ಲಾಗವರ್ನರ್ ಬಿ.ಎಂ.ಭಟ್ ಹೇಳಿದರು.
ಎ.ಬಿ.ಶೆಟ್ಟಿ ದಂತ ಮಹಾ ವಿದ್ಯಾಲಯ ದೇರಳಕಟ್ಟೆ ಮಂಗಳೂರು ಮತ್ತು ಸುಂದರ್ ಹೆಗ್ಡೆ ಆರೋಗ್ಯ ಕೇಂದ್ರ ದಬ್ಬೆಕಟ್ಟೆ ಸಂಯುಕ್ತ ಆಶ್ರಯದಲ್ಲಿವಿನಾಯಕ ಸಭಾಗೃಹ ಕುಂಭಾಸಿಯಲ್ಲಿಜರುಗಿದ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷೆ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಎ.ಬಿ.ಶೆಟ್ಟಿ ದಂತ ವಿದ್ಯಾಲಯದ ದಂತ ಜೋಡಣಾ ವಿಭಾಗದ ಎಚ್ ಒಡಿ ಡಾ.ಸುದೀಪ್ ಹೆಗ್ಡೆ ಶಿಬಿರದ ವಿಷೇಶತೆಯನ್ನು ವಿವರಿಸಿದರು. ರೋಟರಿ ವಲಯ 2ರ ಅಸಿಸ್ಟೆಂಟ್ ಗವರ್ನರ್ ಸುಧಾಕರ್ ಶೆಟ್ಟಿ, ದಬ್ಬೆಕಟ್ಟೆ ಸುಂದರ್ ಹೆಗ್ಡೆ ಆರೋಗ್ಯ ಕೇಂದ್ರ ವೈದ್ಯ ಡಾ.ಸುರೇಂದ್ರ ಶೆಟ್ಟಿ ಶುಭ ಹಾರೈಸಿದರು. ದಬ್ಬೆಕಟ್ಟೆ ಅರೋಗ್ಯ ಕೇಂದ್ರ ವೈದ್ಯರಾದ ಡಾ.ಪವಿತ್ರ, ಡಾ.ರೇಷ್ಮಾ, ಕಾರ್ಯರ್ಮದ ಪ್ರಾಯೋಜಕರಲ್ಲೊಬ್ಬರಾದ ಉಮೇಶ್ ಎಂ. ನಾಯ್ ್ಕ, ರೋಟರಿ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ಎ.ಬಿ. ಶೆಟ್ಟಿ ದಂತ ವಿದ್ಯಾಲಯದ 70 ಜನ ವೈದ್ಯರು, 30 ಸಿಬ್ಬಂದಿಗಳು ಭಾಗವಹಿಸಿದ್ದು, ಶಿಬಿರದಲ್ಲಿ32 ಜನ ಫಲಾನುಭವಿಗಳು ದಂತಪಂಕ್ತಿ ಜೋಡಿಸಿಕೊಂಡರು. ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಸ್ವಾಗತಿಸಿದರು. ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ್ ವಂದಿಸಿದರು.

ಪೋಟೋ//21ಎಬಿ-ಡಿಎನ್ ಟಿ1// ರೋಟರಿ ಜಿಲ್ಲೆ3182ರ ಜಿಲ್ಲಾಗವರ್ನರ್ ಬಿ.ಎಂ.ಭಟ್ ಇವರು ವಿನಾಯಕ ಸಭಾಗೃಹ ಕುಂಭಾಸಿಯಲ್ಲಿಜರುಗಿದ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉದ್ಘಾಟಿಸಿದರು.

ಪೋಟೋ//21ಎಬಿ-ಡಿಎನ್ ಟಿ2// ಎ.ಬಿ.ಶೆಟ್ಟಿ ದಂತ ಮಹಾ ವಿದ್ಯಾಲಯ ದೇರಳಕಟ್ಟೆ ಮಂಗಳೂರು ಮತ್ತು ಸುಂದರ್ ಹೆಗ್ಡೆ ಆರೋಗ್ಯ ಕೇಂದ್ರ ದಬ್ಬೆಕಟ್ಟೆ ಸಂಯುಕ್ತ ಆಶ್ರಯದಲ್ಲಿವಿನಾಯಕ ಸಭಾಗೃಹ ಕುಂಭಾಸಿಯಲ್ಲಿದಂತ ಪಂಕ್ತಿ ಜೋಡಣಾ ಶಿಬಿರ ಜರುಗಿತು.

..............

ವಿಸೂ: ಕೋಟೇಶ್ವರ ರೋಟರಿ ನಮ್ಮ ವಿಕದ ಜಾಹೀರಾತು ಪಾರ್ಟಿ, ಸುದ್ದಿಯನ್ನು ತುರ್ತು ಪ್ರಕಟಿಸಿ ಸರ್ .