ಸರಳ ಜನ್ಮದಿನ ಆಚರಣೆಗೆ ನಿರ್ಧಾರ

Contributed bygskmblvk@gmail.com|Vijaya Karnataka
simple birthday celebration with community programs
ಸರಳ ಜನ್ಮದಿನ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ: ‘‘ಮಾಜಿ ಶಾಸಕ ಎ.ಎಸ್ .ಪಾಟೀಲ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಬದಲು ಕಾರ್ಮಿಕರಿಗೆ ಅಲ್ಪೋಪಹಾರ, ಬಡವರಿಗೆ ನೆರವು ಹಾಗೂ ರೈತರಿಗೆ ಉಪಯುಕ್ತವಾಗುವ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರಳವಾಗಿ ಆಚರಿಸಲಾಗುವುದು’’ ಎಂದು ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘‘ರಾಜ್ಯಾದ್ಯಂತ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಸೂಚನೆ ಮಾಜಿ ಶಾಸಕ ಎ.ಎಸ್ .ಪಾಟೀಲ ನೀಡಿದ್ದಾರೆ’’ ಎಂದು ತಿಳಿಸಿದರು.

‘‘ಜನ್ಮದಿನದ ಅಂಗವಾಗಿ ದೇವಸ್ಥಾನದಲ್ಲಿವಿಶೇಷ ಪೂಜೆ, ಕಾರ್ಮಿಕರಿಗೆ ಅಲ್ಪೋಪಹಾರ ವಿತರಣೆ, ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿದ 57 ಕಡು ಬಡ ರೈತರ ಹೆಸರಿನಲ್ಲಿಬೆಳೆ ವಿಮೆ ಕಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’’ ಎಂದರು.

ಬಿಜೆಪಿ ಮುಖಂಡರಾದ ಡಾ.ವೀರೇಶ ಪಾಟೀಲ, ಸಿದ್ದರಾಜ ಹೊಳಿ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಮಲ್ಲಿಕಾರ್ಜುನ ತಂಗಡಗಿ ಮಾತನಾಡಿದರು.

ಎಂ.ಆರ್ .ಪಾಟಿಲ, ಸೋಮನಗೌಡ ಬಿರಾದಾರ(ಕವಡಿಮಟ್ಟಿ), ಎಸ್ .ಎಸ್ .ಶಿವಣಗಿ, ಅಶೋಕ ರಾಠೋಡ(ನೇಬಗೇರಿ), ಶ್ರೀಶೈಲ ದೊಡಮನಿ, ಸಂಗಪ್ಪ ಬೀಸಲದಿನ್ನಿ, ಹುಲಗೇಶ ಈಳಗೇರ, ರವೀಂದ್ರ ಬಿರಾದಾರ, ಪುನಿತ ಹಿಪ್ಪರಗಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.