ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್ ) ಅರಿವು ಕಾರ್ಯಕ್ರಮದಲ್ಲಿಪ್ರತಿಯೊಬ್ಬ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನ್ಯಾಯವಾದಿ ಎಂ.ಎಸ್ . ಪೂಜೇರಿ ಹೇಳಿದರು.ತಾಲೂಕಿನ ನಂದಿಕುರಳಿ ಸರಕಾರಿ ಪ್ರೌಢಶಾಲೆಯಲ್ಲಿತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಲ್ಲಿಏರ್ಪಡಿಸಲಾಗಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ ಅರಿವು ಕಾರ್ಯಾಗಾರದಲ್ಲಿಅವರು ಮಾತನಾಡಿ, ‘‘ಎಸ್ ಐಆರ್ ಸಮೀಕ್ಷೆಯಲ್ಲಿಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿತಮ್ಮ ಹೆಸರನ್ನು ಕಡ್ಡಾಯವಾಗಿ ಉಳಿಸಿಕೊಳ್ಳಬೇಕು,’’ ಎಂದು ತಿಳಿಸಿದರು.
ಫನೆಲ್ ವಕೀಲ ಸುಧೀರ ಕಳ್ಳೆ ಮಾತನಾಡಿ, ‘‘ ಭಾರತೀಯ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಅಮೂಲ್ಯವಾದ ಮತದಾನದ ಹಕ್ಕು ನೀಡಿದೆ. ಈ ಹಕ್ಕು ಉಳಿಸಿಕೊಳ್ಳಲು ಎಲ್ಲನಾಗರಿಕರೂ ಎಸ್ ಐಆರ್ ಸಮೀಕ್ಷೆಯಲ್ಲಿಸಕ್ರಿಯವಾಗಿ ಭಾಗವಹಿಸಬೇಕು. ನಕಲಿ ಮತದಾನ ತಡೆಯಲು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿ, ಈ ಪ್ರಕ್ರಿಯೆ ಯಶಸ್ವಿಗೊಳಿಸಬೇಕು,’’ ಎಂದು ಮನವಿ ಮಾಡಿದರು.
ಸಿಆರ್ ಪಿ ವೈ.ಕೆ. ಭಜಂತ್ರಿ ಮಾತನಾಡಿದರು. ಮುಖ್ಯೋಪಾಧ್ಯಾಯ ಪಿ. ಆರ್ . ಸಮಾಜೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್ .ಬಿ. ತಾಂವಶಿ, ಎ.ಎಸ್ . ಧನಗರ, ಡಿ.ಡಿ. ನದಾಫ್ , ವಿ.ಡಿ. ಪಾಟೀಲ, ಎಸ್ .ಆರ್ . ನಾಯಿಕ, ಎಸ್ .ಎಸ್ . ಪೋಳ, ಎಸ್ .ಎ. ಮಗದುಮ…, ಕೆ.ಎ. ಚೌಗುಲಾ, ಎಸ್ .ಆರ್ . ಗಣಾಚಾರಿ, ಜಿ.ಎಮ…. ಹಿರೇಕುರುಬರ ಹಾಗೂ ವಿದ್ಯಾರ್ಥಿಗಳು ಇದ್ದರು.
- 22ರಾಯಬಾಗ1
ರಾಯಬಾಗ ತಾಲೂಕು ನಂದಿಕುರಳಿ ಸರಕಾರಿ ಪ್ರೌಢಶಾಲೆಯಲ್ಲಿತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿಹಮ್ಮಿಕೊಂಡಿದ್ದ ಎಸ್ ಐಆರ್ ಅರಿವು ಕಾರ್ಯಾಗಾರದಲ್ಲಿಸಿಆರ್ ಪಿ ವೈ.ಕೆ. ಭಜಂತ್ರಿ ಮಾತನಾಡಿದರು.