ಮಳೆ ಬರ ಬೆಳೆ ಗರ ಅಭಿಯಾನ

Contributed byrmgvklvy@gmail.com|Vijaya Karnataka
Vijay Karnataka
ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಕೃಷಿ ಇಲಾಖೆ ಸಲಹೆ | ಈರುಳ್ಳಿ ಬೆಳೆ ಉಳಿಸಿಕೊಳ್ಳಲು ಸ್ಟ್ರಿಂಕ್ಲರ್ ಮೊರೆ(ಕಿಕ್ಕರ್ )

ಮಳೆ ಬೇಡುತ್ತಿದೆ ಮೆಕ್ಕೆಜೋಳ
-----

ರಾಮಗಿರಿ ಯೋಗೀಶ್ ಹೊಳಲ್ಕೆರೆ

ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ

ಅರೆಮಲೆನಾಡು ಹೊಳಲ್ಕೆರೆ ತಾಲೂಕನ್ನು ಬರದ ಛಾಯೆ ಆವರಿಸಿದೆ, ಬಿತ್ತನೆ ಬೆಳೆಗಳು ಮಳೆಗಾಗಿ ಮುಗಿಲು ನೋಡುತ್ತಿವೆ. ಚಿತ್ರದುರ್ಗ ಜಿಲ್ಲಾದ್ಯಂತ ಉತ್ತಮ ಮಳೆ, ಬೆಳೆಯಾಗುವುದು ಹೊಳಲ್ಕೆರೆ ತಾಲೂಕಿನಲ್ಲಿ, ಆದರೆ ಈ ಬಾರಿ ಮಳೆ ಕೊರತೆಯಿಂದ ಬಿತ್ತನೆ ಕುಂಠಿತವಾಗಿದೆ.

ಮುಂಗಾರು ಪೂರ್ವದಲ್ಲಿಉತ್ತಮ ಮಳೆ ನಿರೀಕ್ಷೆ ಹೊಂದಿದ್ದ ರೈತರಿಗೆ ರೇವತಿ, ಅಶ್ವಿನಿ, ಭರಣಿ ಮಳೆಗಳು ಕೈಕೊಟ್ಟಿವೆ. ಕೃತಿಕ, ರೋಹಿಣಿ ಮಳೆಯಿಂದಾಗಿ ತಾಲೂಕಿನ ಕೆಲವೆಡೆ ಹಳ್ಳಕೊಳ್ಳಗಳು ಹರಿದು, ಕೃಷಿ ಚಟುವಟಿಕೆಗಳು ಗರಿಗೆದರಿದ್ದವು.

ಆದರೆ ಬಿತ್ತನೆ ಸಂದರ್ಭದಲ್ಲಿಮೃಗಶಿರಾ, ಆರಿದ್ರಾ ಮಳೆಗಳು ಕೈಕೊಟ್ಟವು. ‘ಕೆರೆಗೆ ನೀರಲ್ಲ, ಹೊಲಕ್ಕೆ ಹದವಲ್ಲ’ ಎಂಬಂತೆ ತುಂತುರು ಮಳೆಯಷ್ಟೇ ಖಾತ್ರಿಯಾಯಿತು. ನಂತರ ಪುನರ್ವಸು, ಪುಷ್ಯ ಮಳೆಗಳು ಕೈಹಿಡಿಯುವ ನಿರೀಕ್ಷೆ ಕೂಡ ಹುಸಿಯಾಗಿದೆ. ಕಳೆದ ವರ್ಷ ಮುಂಗಾರು ಆರಂಭದಿಂದ ಜುಲೈವರೆಗೆ 295 ಮಿಮೀ ವಾಡಿಕೆ ಮಳೆ ಪೈಕಿ 245.9 ಮಿಮೀ ಮಳೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ265.5 ಮಿಮೀ ವಾಡಿಕೆ ಮಳೆ ಪೈಕಿ ಇದುವರೆಗೆ ಕೇವಲ 163.6 ಮಿಮೀ ಮಳೆಯಾಗಿ, 102 ಮಿಮೀ ಮಳೆ ಕೊರತೆ ಉಂಟಾಗಿದೆ.

ತುಂತುರು ನೀರಿನ ಮೊರೆ:

ಮಳೆ ಕೊರತೆಯಿಂದ ಮೆಕ್ಕೆಜೋಳ, ರಾಗಿ ಸೇರಿ ಇರತೆ ಬೆಳೆಗಳು ಒಣಗುವ ಸ್ಥಿತಿ ಇದೆ. ಈ ಸಂಕಷ್ಟದಿಂದ ಹೊರಬರಲು ಕೆಲ ರೈತರು ಕೊಳವೆಬಾವಿ ನೀರಿನ ಮೊರೆ ಹೋಗಿದ್ದಾರೆ. ನೀರಿನ ವ್ಯವಸ್ಥೆ ಇಲ್ಲದ ರೈತರು, ಅಕ್ಕಪಕ್ಕದ ಜಮೀನು, ತೋಟಗಳಿಂದ ನೀರು ಪಡೆದು ಸ್ಟ್ರಿಂಕ್ಲರ್ ಜಟ್ ಮೂಲಕ ಈರುಳ್ಳಿ, ಮೆಕ್ಕೆಜೋಳ ಪೈರು ಉಳಿಸಿಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾರೆ.

--

ಕೋಟ್ ...

ಮುಂಗಾರು ಹಂಗಾಮಿನಲ್ಲಿಮಳೆ ಕಡಿಮೆಯಾಗಿದೆ. 38,600 ಹೆಕ್ಟೇರ್ ಮೆಕ್ಕೆಜೋಳ ಗುರಿ ಪೈಕಿ 3,236 ಹೆಕ್ಟೇರ್ ನಲ್ಲಿಮಾತ್ರ ಬಿತ್ತನೆ ಸಾಧ್ಯವಾಗಿದೆ. ಮೆಕ್ಕೆಜೋಳ ಬಿತ್ತನೆ ಸಮಯ ಮೀರಿದ್ದು, ರಾಗಿ ಬಿತ್ತನೆಗೆ ಅವಕಾಶವಿದೆ. ಬೆಳೆ ವಿಮೆ ಮಾಡಿಸಲು ಇದು ಸಮಯ. ಬಿತ್ತನೆ ಮಾಡದಿದ್ದರೂ ವಿಮೆ ಮಾಡಿಸಬಹುದು. ಎಲ್ಲರೈತರೂ ಬೆಳೆ ವಿಮೆ ಮಾಡಿಸಿ.

-ಎನ್ .ಚಂದ್ರಕುಮಾರ್ , ಸಹಾಯಕ ಕೃಷಿ ನಿರ್ದೇಶಕ, ಹೊಳಲ್ಕೆರೆ.

--

ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದಾರೆ. ಮಳೆಯಿಲ್ಲದೆ ಬಿತ್ತನೆ ಮಾಡಲು ರೈತರು ಭಯ ಪಡುತ್ತಿದ್ದಾರೆ. ಕೆಲವರು ದೇವರ ನಂಬಿ ಬಿತ್ತುತ್ತಿದ್ದಾರೆ. ಈ ಬಾರಿ ಯಾವ ಬೆಳೆಯೂ ರೈತರ ಕೈ ಹಿಡಿಯುವುದಿಲ್ಲ. ಸರಕಾರ ಹೊಳಲ್ಕೆರೆ ಬರಪೀಡಿತ ತಾಲೂಕು ಎಂದು ಘೋಷಿಸಿ, ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಬರ ಪರಿಹಾರ ನೀಡಬೇಕು.

-ದಾನವೇಂದ್ರ, ರೈತ ಮುಖಂಡ, ಚನ್ನಸಮುದ್ರ.

--

ಬಿತ್ತನೆ ಪ್ರಮಾಣ ಕುಂಠಿತ

ಮೆಕ್ಕೆಜೋಳ ಹಾಗೂ ರಾಗಿ ತಾಲೂಕಿನ ಮುಖ್ಯ ಬೆಳೆಗಳಾಗಿದ್ದು, ಕೃತಿಕ ಹದ ಮಳೆಯಾದ ಸಂದರ್ಭದಲ್ಲಿರೈತರು ಭೂಮಿ ಹಸನು ಮಾಡಿಕೊಂಡಿದ್ದರಿಂದ ರೋಹಿಣಿ, ಮೃಗಶಿರಾ ಮಳೆಗೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ ಈಗ ಮಳೆಗಳು ಕೈಕೊಟ್ಟಿದ್ದು, ಮೆಕ್ಕೆಜೋಳ ಬೆಳೆ ಬಾಡಲಾರಂಭಿಸಿದೆ. ತಾಲೂಕಿನಲ್ಲಿ75,750 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಕಳೆದ ವರ್ಷ 52,845 ಹೆಕ್ಟೇರ್ ಗುರಿ ಪೈಕಿ 38,425 ಹೆಕ್ಟೇರ್ ಬಿತ್ತನೆಯಾಗಿತ್ತು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ50,484 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇದುವರೆಗೆ ಕೇವಲ 4,912 ಹೆಕ್ಟೇರ್ ಪ್ರದೇಶದಲ್ಲಿಬಿತ್ತನೆಯಾಗಿದೆ. ಈ ಪೈಕಿ 3,236 ಹೆಕ್ಟೇರ್ , 1416 ಹೆಕ್ಟೇರ್ ರಾಗಿ ಬಿತ್ತಲಾಗಿದೆ.

----

ಜು. 23.ಹೆಚ್ . ಎಲ್ . ಕೆ. 1.ಎ

ಹೊಳಲ್ಕೆರೆ ತಾಲೂಕಿನಲ್ಲಿಮಳೆ ಇಲ್ಲದೆ ಬಾಡುತ್ತಿರುವ ಮೆಕ್ಕೆಜೋಳ.

ಜು. 23.ಹೆಚ್ . ಎಲ್ . ಕೆ. 1.ಬಿ

ಹೊಳಲ್ಕೆರೆ ತಾಲೂಕಿನಲ್ಲಿಈರುಳ್ಳಿ ಬೆಳೆ ಉಳಿಸಿಕೊಳ್ಳಲು ರೈತ ತುಂತುರು ನೀರಾವರಿ ಮೊರೆ ಹೋಗಿದ್ದಾರೆ.