ಹುಟ್ಟೂರಿನಲ್ಲಿಡಾ. ಗಿರೀಶ್ ಭಾರದ್ವಾಜ್ ಗೆ ಸಾರ್ವಜನಿಕ ನುಡಿ ನಮನ

Contributed bympadmanabha51@gmail.com|Vijaya Karnataka
public tribute honor for girish bharadwaj
ವಿಕ ಸುದ್ದಿಲೋಕ ಸುಳ್ಯ

ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ಅರಂಬೂರಿನ ಸಂಘ ಸಂಸ್ಥೆಗಳ ವತಿಯಿಂದ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿನಡೆಯಿತು.
ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಧಾರ್ಮಿಕ ಮುಖಂಡ ಗೋಪಾಲಕೃಷ್ಣ ಭಟ್ , ನಿವೃತ್ತ ಶಿಕ್ಷಕ ದಿವಾಕರ ನಾಯಕ್ ಅರಂಬೂರು, ಬಾಪೂ ಸಾಹೇಬ್ ಪರಿವಾರಕಾನ, ಬಂಗಾರು ಭಾರದ್ವಾಜ್ , ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ಗೌಡ ನೆಡ್ಚಿಲು, ಉದ್ಯಮಿ ಜಗದೀಶ್ ಸರಳಿಕುಂಜ ನುಡಿನಮನ ಸಲ್ಲಿಸಿದರು.

ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ನಾಗರಿಕರು ಭಾರದ್ವಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಜನಾ ಮಂದಿರದ ಗೌರವಾಧ್ಯಕ್ಷ ರತ್ನಾಕರ ರೈ ಪ್ರಾಸ್ತಾವಿಕ ಮಾತನಾಡಿದರು. ಉಷಾ ಪಾಲಡ್ಕ ವಂದಿಸಿದರು. ದೇವಿಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಫೋಟೋ

24ಎಸ್ ಯುಎಲ್ - ಅರಂಬೂರಿನಲ್ಲಿಡಾ. ಗಿರೀಶ್ ಭಾರಧ್ವಾಜ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.