ವಿಕ ಸುದ್ದಿಲೋಕ ಹೊಸನಗರಪದವಿಪೂರ್ವ ಶಿಕ್ಷಣ ಪ್ರತಿ ವಿದ್ಯಾರ್ಥಿಗೂ ಜೀವನದ ಮಹತ್ವದ ಘಟ್ಟವಾಗಿದೆ. ಈ ಸಂದರ್ಭದಲ್ಲಿವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಗುರುತರ ಜವಾಬ್ದಾರಿ ಉಪನ್ಯಾಸಕ ವರ್ಗಕ್ಕಿರುತ್ತದೆ ಎಂದು ಡಿಡಿಪಿಯು ಚಂದ್ರಪ್ಪ ಎಸ್ . ಗುಂಡುಪಲ್ಲಿಹೇಳಿದರು.
ಇಲ್ಲಿನ ಆರ್ಯಈಡಿಗರ ಭವನದಲ್ಲಿಸೋಮವಾರ ಏರ್ಪಡಿಸಿದ್ದ ಕಾರ ್ಯಕ್ರಮದಲ್ಲಿಪ್ರಸಕ್ತ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಹಾಗೂ ಇತರ ವೇದಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹದಿವಯಸ್ಸಿನಲ್ಲಿಮಕ್ಕಳ ಮನಸ್ಸು ಚಂಚಲವಾಗಿದ್ದು, ಸೂಕ್ಷತ್ರ್ಮತೆಯಿಂದ ಕೂಡಿರುತ್ತದೆ. ಹಿರಿಯರ ಮಾತು ಕೇಳದೇ ಮೊಂಡುತನ ಮಾಡಬಹುದು. ಆದರೆ, ಮಕ್ಕಳು ತಪ್ಪುದಾರಿಗೆ ಹೋಗದಂತೆ ಬುದ್ಧಿ ಹೇಳಿ, ಸರಿಯಾದ ಗುರಿ ಕಲ್ಪಿಸುವ ಜವಾಬ್ದಾರಿ ಉಪನ್ಯಾಸಕರು ಹಾಗೂ ಪೋಷಕರದ್ದಾಗಿದೆ. ಇದನ್ನು ಹೊಣೆಗಾರಿಕೆ ಎಂದುಕೊಳ್ಳದೇ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಸುವರ್ಣಾವಕಾಶ ಇದು ಎಂದು ಭಾವಿಸಬೇಕು ಎಂದರು.
ಪ್ರಾಂಶುಪಾಲ ಸ್ವಾಮಿರಾವ್ ಅಧ್ಯಕ್ಷತೆ ವಹಿಸಿದ್ದರು. ಕೊಡಚಾದ್ರಿ ಕಾಲೇಜಿನ ಪ್ರಾಧ್ಯಾಪಕ ಪ್ರಭಾಕರ್ ರಾವ್ ವಿಶೇಷ ಉಪನ್ಯಾಸ ನೀಡಿದರು. ಎಸ್ ಡಿಎಂಸಿ ಉಪಾಧ್ಯಕ್ಷ ಎಂ.ಪಿ. ಸುರೇಶ್ , ಕನ್ನಡ ಉಪನ್ಯಾಸಕರಾದ ರವಿ, ಡಾ.ಕೆ.ಎಸ್ .ಸುಮಾ, ದಾಮೋದರ ಶೆಣೈ, ಪ್ರಮುಖರಾದ ಎಂ.ಗಣಪತಿ, ಕೆ.ಟಿ.ಶ್ರೀಧರ್ , ಶಿವಕುಮಾರ ಸ್ವಾಮಿ, ರವಿಕುಮಾರ್ , ತೇಜಸ್ವಿನಿ, ಅನಿಷಾ, ಡೆಲ್ಸಿನ್ ಕೆವರ್ಟ್ ಮತ್ತಿತರರು ಇದ್ದರು.
21ಎಚ್ ಒಎಸ್ ಪಿ5:
ಹೊಸನಗರದ ಆರ್ಯ ಈಡಿಗರ ಸಭಾಭವನದ ಆವರಣದಲ್ಲಿಪಿಯು ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕ ಸಾಂಸ್ಕೃತಿಕ ವೇದಿಕೆಗಳಿಗೆ ಡಿಡಿಪಿಯು ಚಂದ್ರಪ್ಪ ಎಸ್ . ಗುಂಡುಪಲ್ಲಿಉದ್ಘಾಟಿಸಿದರು.