Attractive Training And Recruitment Opportunities In Davangere
ಚೂರು ಸುದ್ದಿ 01
Contributed by: BASAVARAJU KG|Vijaya Karnataka•
ಪಿಜಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ದಾವಣಗೆರೆ : ಮೈಸೂರಿನ ಚಾಮರಾಜೇಂದ್ರ ಸರಕಾರಿ ದೃಶ್ಯ ಕಲಾ ಕಾಲೇಜಿನಲ್ಲಿಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಎಂವಿಎ ಸ್ನಾತಕೋತ್ತರ ಪದವಿ ಪ್ರವೇಕ್ಕೆ ಬಿವಿಎ ಅಥವಾ ಸಮಾನಾಂತರ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನ. ಮಾಹಿತಿಗೆ ದೂ: 0821-2438931 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.----
ಅಗ್ನಿವೀರ್ ನೇಮಕಾತಿ
ದಾವಣಗೆರೆ: ತೆಲಂಗಾಣದ ಸಿಕಂದರಾಬಾದ್ ನ ಇಎಂಇ ತರಬೇತಿ ಕೇಂದ್ರದಲ್ಲಿಯುನಿಟ್ ಹೆಡ್ ಕ್ವಾಟ್ರ್ರಸ್ (ಯುಎಚ್ ಕ್ಯೂ) ಕೋಟಾದಡಿ 22 ವರ್ಷದೊಳಗಿನ ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರಿಗೆ ಅಕ್ಟೋಬರ್ 11ರವರೆಗೆ ಅಗ್ನಿಪಥ್ ಯೋಜನೆಯಡಿ ಆಗ್ನಿವೀರ್ ಟ್ರೇಡ್ ಮನ್ , ಅಗ್ನಿವೀರ್ ಟೆಕ್ನಿಕಲ್ (ತಾಂತ್ರಿಕ) ಮತ್ತು ಕ್ರೀಡಾ ಕೋಟಾದಡಿ ನೇಮಕಾತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ: 04027-863016 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
----
ರಫ್ತು ನಿರ್ವಹಣೆ ತರಬೇತಿ
ದಾವಣಗೆರೆ: ಜಿಲ್ಲಾಕೈಗಾರಿಕಾ ಕೇಂದ್ರ ಹಾಗೂ ಧಾರವಾಡದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಯೋಗದಲ್ಲಿಆಗಸ್ಟ್ 17ರಿಂದ 22ರವರೆಗೆ ದಾವಣಗೆರೆಯಲ್ಲಿರಫ್ತು ನಿರ್ವಹಣೆ ತರಬೇತಿ ಹಮ್ಮಿಕೊಳ್ಳಲಾಗಿದೆ. ರಫ್ತು ವ್ಯವಹಾರ ಪ್ರಾರಂಭಿಸಲು ಇಚ್ಛಿಸುವ ಎಂಎಸ್ ಎಂಇ ಉದ್ದಿಮೆದಾರರು, ಭಾವಿ ರಫ್ತುದಾರರು, ವರ್ತಕರು ಹಾಗೂ ರಫ್ತು ವ್ಯವಹಾರ ಕುರಿತು ಬೋಧನೆಯಲ್ಲಿನಿರತವಾಗಿರುವ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಫ್ತು ವ್ಯವಹಾರದಲ್ಲಿಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆಯಬಹುದು. ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಾಲತಾಣ: ಘ್ಕಿಡಿಡಿಡಿ.್ಡ್ಝs.ka್ಟ್ಞaಠಿaka.ಜಟv.ಜ್ಞಿ ಮೂಲಕ ಜುಲೈ 31ರೊಳಗೆ ಅರ್ಜಿ (ಗೂಗಲ್ ಫಾಮ್ ರ್ ) ಸಲ್ಲಿಸಬಹುದು. ಮಾಹಿತಿಗೆ ಮೊ: 80737 07446, 97427 09229 ಸಂಪರ್ಕಿಸಬಹುದು ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.