***26ರಂದು ಕಾಸರಗೋಡಿನಲ್ಲಿಆರ್ ವಿ ಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್ ಆರಂಭ

Contributed bystevan.rego@timesgroup.com|Vijaya Karnataka
26
ಅರವಿಂದ್ - ನಮ್ಮ ಕುಡ್ಲ, ಕಾಸರಗೋಡು

ವಿಕ ಸುದ್ದಿಲೋಕ ಮಂಗಳೂರು
ಆರ್ ವಿಆರ್ ಹೆಲ್ತ್ ಕೇರ್ ಇದರ ಉಪ ಶಾಖೆ ಆರ್ ವಿ ಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್ ಕಾಸರಗೋಡಿನಲ್ಲಿಜು.26ರಂದು ಆರಂಭಗೊಳ್ಳಲಿದೆ. ಈಗಾಗಲೇ ಮಂಗಳೂರಿನ ಫಳ್ನೀರ್ ನಲ್ಲಿಕಳೆದ ಒಂದೂವರೆ ತಿಂಗಳಿನಿಂದ ರೋಗಿಗಳಿಗೆ ಸೇವೆ ನೀಡುತ್ತಾ ಬಂದಿದೆ ಎಂದು ಆರ್ ವಿಆರ್ ಸೂಪರ್ ಸ್ಪೆಶಾಲಿಟಿ ಸೆಂಟರ್ ನ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ . ಹೇಳಿದರು.

ಅವರು ನಗರದ ಖಾಸಗಿ ಹೋಟೆಲ್ ನಲ್ಲಿಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಆರ್ ವಿಆರ್ ಹೆಲ್ತ್ ಕೇರ್ ನಲ್ಲಿಎಲ್ಲರೋಗಿಗಳಿಗೆ ಎಲ್ಲರೀತಿಯ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ. ವಿಶೇಷವಾಗಿ ನ್ಯೂರೋ, ಅರ್ಬುಧ ರೋಗ ಸಂಬಂಧಿತ ಚಿಕಿತ್ಸೆ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಒಂದೇ ಸೂರಿನಡಿಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಿಶೇಷವಾಗಿ ಕಾಸರಗೋಡಿನ ಬಳಿಕ ಚಿಕ್ಕಮಗಳೂರಿನಲ್ಲೂಆರ್ ವಿಆರ್ ಹೆಲ್ತ್ ಕೇರ್ ಉಪಶಾಖೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಇದರ ಜತೆಗೆ ಶಿವಮೊಗ್ಗ, ಬೆಂಗಳೂರಿನಲ್ಲೂಆರಂಭವಾಗಲಿದೆ. ಮಂಡ್ಯ ಭಾಗದಲ್ಲಿಆರ್ ವಿಆರ್ ನಿಂದ ಉಚಿತ ಧರ್ಮ ಆಸ್ಪತ್ರೆ ಆರಂಭಿಸುವ ಚಿಂತನೆ, ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

ಆರೋಗ್ಯ ಬೈ ಆರ್ ವಿಆರ್ ಮೂಲಕ ಹಿಂದುಳಿದ ವರ್ಗಗಳಿಗೆ ತಲುಪುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಕಾರ ್ಯಕ್ರಮಗಳನ್ನು ಕೂಡ ಆರಂಭಿಸಲಾಗಿದ್ದು, ಇದರಲ್ಲಿತಜ್ಞ ವೈದ್ಯರ ಸಲಹೆಗಳು, ಸಮಗ್ರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿಗಳನ್ನು ಸ್ಥಳೀಯ ಸಮುದಾಯಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿಈ ಕಾರ ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉತ್ತಮ ಸ್ಪಂದನೆ ದೊರಕಿದ ಬೆನ್ನಲ್ಲೇ ಕರ್ನಾಟಕ, ಕೇರಳ ಸೇರಿದಂತೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದರು. ಆರ್ ವಿಆರ್ ನ ಅಧ್ಯಕ್ಷ ವಿಜಯ್ ಎಂ.ಎನ್ . ಶೆಟ್ಟಿ, ಆರ್ ವಿಆರ್ ನ ಪ್ರಮುಖ ತಜ್ಞರಾದ ಡಾ.ಅಂಜನ್ ಕುಮಾರ್ , ಡಾ.ವಿN್ನೕಶ್ , ಅಡಾ. ಅಬೂ ಹಾಗೂ ಸಿಇಇ ಅನಂತ್ ಉಪಸ್ಥಿತರಿದ್ದರು.