ಅಂಗನವಾಡಿ ಕಾರ್ಯಕರ್ತೆಯರು , ಸಹಾಯಕಿಯರ ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಹ್ವಾನಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ.ಶಿವಮೊಗ್ಗ ಕಾರ್ಯಕರ್ತೆಯರು-14, ಸಹಾಯಕಿಯರು -77, ಸಾಗರ- ಕಾರ್ಯಕರ್ತೆಯರು-2, ಸಹಾಯಕಿಯರು -52, ಭದ್ರಾವತಿ- ಕಾರ್ಯಕರ್ತೆಯರು-18, ಸಹಾಯಕಿಯರು -56, ಸೊರಬ- ಕಾರ್ಯಕರ್ತೆಯರು-01, ಸಹಾಯಕಿಯರು -37, ಶಿಕಾರಿಪುರ- ಕಾರ್ಯಕರ್ತೆಯರು-01, ಸಹಾಯಕಿಯರು -22, ತೀರ್ಥಹಳ್ಳಿ- ಕಾರ್ಯಕರ್ತೆಯರು-11, ಸಹಾಯಕಿಯರು -50, ಹೊಸನಗರ- ಕಾರ್ಯಕರ್ತೆಯರು-6, ಸಹಾಯಕಿಯರು -114 ಸೇರಿದಂತೆ ಒಟ್ಟು 53 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 408 ಸಹಾಯಕಿಯರ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಆಯಾ ತಾಲೂಕು ಅಂಗನವಾಡಿಗಳಲ್ಲಿಪ್ರಕಟಿಸಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.