ಹಾಲಿವುಡ್ ನ ಖ್ಯಾತ ನಟಿ ಸೆಲೆನಾ ಗೊಮೆಜ್ ತಮ್ಮ 34ನೇ ಜನ್ಮದಿನವನ್ನು ಇಟಲಿ ಯ ಸುಂದರ ತಾಣಗಳಲ್ಲಿಸೆಲೆಬ್ರೇಟ್ ಮಾಡಿದ್ದಾರೆ. ಪತಿ ಬೆನ್ನಿ ಬ್ಲ್ಯಾಂಕೊ ಜತೆಗೆ ಇಟಲಿ ಪ್ರವಾಸ ಕೈಗೊಂಡಿರುವ ಅವರು ಅಲ್ಲಿಒಟ್ಟಿಗೆ ತಮ್ಮ ಇಷ್ಟದ ತಿನಿಸುಗಳನ್ನು ತಾವೇ ಮಾಡಿ ಸವಿದಿದ್ದಾರೆ. ಬೆನ್ನಿ ತನ್ನ ಪತ್ನಿಗೆ ಸ್ಪ್ಯಾಗೆಟಿ ಮಾಡಿಕೊಟ್ಟು ತಮ್ಮ ಕೈಯಾರೆ ತಿನಿಸಿದ್ದಾರೆ. ಗೊಮೆಜ್ ತಮ್ಮ ಪತಿಗೆ ಎಗ್ ಪ್ಲಾಂಟ್ ಪರ್ಮೆಸನ್ ಮಾಡಿ ಕೊಟ್ಟಿದ್ದಾರೆ. ಈ ತಾರಾದಂಪತಿಯ ವಿಭಿನ್ನ ಬತ್ ರ್ ಡೇ ಸೆಲೆಬ್ರೇಶನ್ ವಿಡಿಯೊಗಳು ವೈರಲ್ ಆಗಿವೆ.