ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬೆಂಗಳೂರಿಗೆ ವಲಸೆ ಬಂದು ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕುಟುಂಬದ ಸದಸ್ಯರ ಮಕ್ಕಳ ಸಮೀಕ್ಷೆ ನಡೆಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸುವಲ್ಲಿಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ನಿವಾಸಿ ಶಿಕ್ಷಕ ಸುರೇಂದ್ರ ನಾಡ ಗುಡ್ಡೆಹೋಟೆಲ್ ಅವರು ನಡೆಸುತ್ತಿರುವ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಸ್ವರ್ಣ ಭೂಮಿ ಫೌಂಡೇಶನ್ ಕೋಲಾರ ವತಿಯಿಂದ ಶ್ರೇಷ್ಠ ಸೇವಾ ಪರಂಪರೆ ಪ್ರಶಸ್ತಿ ಗೌರವಿಸಲಾಯಿತು. ಸುರೇಂದ್ರ ಅವರು ಸರಕಾರಿ ಅನುದಾನಿತ ಸಿದ್ದಲಿಂಗೇಶ್ವರ ಪ್ರೌಢಶಾಲೆ ಮಾಗಡಿ ರಸ್ತೆ ಬೆಂಗಳೂರು (ದಕ್ಷಿಣ ಜಿಲ್ಲೆ) ನಲ್ಲಿಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.ಚಿತ್ರ -ಶಿಕ್ಷಕ ಸುರೇಂದ್ರ ನಾಡ ಗುಡ್ಡೆಹೋಟೆಲ್