ಮಳೆಗಾಲದಲ್ಲಿಬರುವ ಕಾಯಿಲೆಗಳ ಮೂಲ ನೀರು. ಮುಂಗಾರಿನ ಆರಂಭ ಸೊಳ್ಳೆಗಳ ಸಂತಾನಾಭಿವೃದ್ಧಿಯ ಪರ್ವ ಕಾಲ. ಸಾಮಾನ್ಯವಾಗಿ ನಿಂತ ನೀರಲ್ಲಿಸೊಳ್ಳೆಗಳು ವೃದ್ಧಿಯಾಗುತ್ತವೆ. ಇದರಿಂದ ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯಾದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಆಹಾರ ಮೂಲದಿಂದ ಭೇದಿ, ಕಾಲಾರ ಕಾಣಿಸುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ ನಿಂದ ಚರ್ಮದ ತೊಂದರೆ, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ. ಹೆಪಟೈಟೀಸ್ ಎ ಕೂಡ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದು, ಇದರ ಮೂಲ ಕಲುಷಿತ ನೀರು ಹಾಗೂ ಆಹಾರ. ಹೀಗಾಗಿ ಈ ಸಮಸ್ಯೆಗಳು ಬರುವ ಮ,ಉನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.ಮುನ್ನೆಚ್ಚರಿಕೆ
ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.ಆಹಾರ ಸೇವಿಸುವ ಮೊದಲು ಕೈಯನ್ನು ನೀಟಾಗಿ ತೊಳೆದುಕೊಳ್ಳಿ.ಬೇಯಿಸದ ತಿನಿಸುಗಳ ಸೇವನೆ ಬೇಡ. ಬಿಸಿಯಾದ ಅದರಲ್ಲೂಹೆಚ್ಚಾಗಿ ಶುಂಠಿ, ಅರಿಷಿಣ, ಕಾಳು ಮೆಣಸು ಇರುವ ಪದಾರ್ಥಗಳನ್ನು ಸೇವಿಸಿ. ತೆರೆದ ಸ್ಥಿತಿಯಲ್ಲಿರುವ ಹಣ್ಣು , ತಿನಿಸು ತಿನ್ನಬೇಡಿ. ರೋಗ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಖನಿಜಾಂಶ ಹೆಚ್ಚಾಗಿ ಇರುವ ಆಹಾರವನ್ನು ಈ ದಿನಗಳಲ್ಲಿತೆಗೆದುಕೊಳ್ಳಿ. ಸಾಧ್ಯವಾದಷ್ಟು ನೀರು ಕುಡಿಯಿರಿ. ನಿಮ್ಮ ದೇಹ ನಿರ್ಜಲೀಕರಣಗೊಳ್ಳಲು ಬಿಡಬೇಡಿ. ಸಮತೋಲಿತ ಆಹಾರ ಸೇವಿಸಿ. ವ್ಯಾಯಾಮ ಹಾಗೂ ವಿಶ್ರಾಂತಿ ಪಡೆಯಿರಿ. ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ. ನೀರು ನಿಲ್ಲಲು ಬಿಡಬೇಡಿ. ರಾತ್ರಿ ಮಲಗುವಾಗಿ ಬೇವಿನ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳಿ. ಸೊಳ್ಳೆ ಕಡಿಯುವುದಿಲ್ಲ.