ಪು. 12

Contributed byShridevi Ambekallu|Vijaya Karnataka
special puja on july 25 features of sri panduranga temple in kalapur
ಕಲ್ಲಾಪುರದ ಮುಖ್ಯಪ್ರಾಣ

ಭಕ್ತಿಯ ಪಾಂಡುರಂಗ
---------

- ಅನಂತ ಕಲ್ಲಾಪುರ

---------

ಇಂಟ್ರೋ: ವ್ಯಾಸರಾಜ ಪ್ರತಿಷ್ಠಾಪಿತ ಶ್ರೀ ಪ್ರಾಣದೇವರು ಹಾಗೂ ಪುರಾತನ ಪಾಂಡುರಂಗ ದೇಗುಲದ ಪರಿಚಯಾತ್ಮಕ ಬರಹ ಇಲ್ಲಿದೆ.

---------

ಶ್ರೀ ವ್ಯಾಸರಾಜರು (ವ್ಯಾಸತೀರ್ಥರು) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದು, ದ್ವೈತ ತತ್ತ್ವಶಾಸ್ತ್ರದ ಪ್ರಮುಖ ಸಂತರು ಮತ್ತು ದಾಸ ಸಾಹಿತ್ಯದ ಪೋಷಕರಾಗಿದ್ದರು. ಇವರು ಹನುಮಂತನನ್ನು ‘ಮುಖ್ಯಪ್ರಾಣ’ ಎಂದು ಭಕ್ತಿಯಿಂದ ಕರೆಯುತ್ತಿದ್ದರು. ವ್ಯಾಸರಾಜರು ತಮ್ಮ ಜೀವಿತಾವಧಿಯಲ್ಲಿದಕ್ಷಿಣ ಭಾರತದಾದ್ಯಂತ ಒಟ್ಟು 732 ಮುಖ್ಯಪ್ರಾಣ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ನಂಬಲಾಗಿದೆ. ಹೀಗೆ ವ್ಯಾಸರಾಜ ಪ್ರತಿಷ್ಠಿತ ಮುಖ್ಯಪ್ರಾಣ ದೇಗುಲವು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಅಕ್ಕಿ ಆಲೂರ ಗ್ರಾಮದ ದೇಸಾಯಿ ಕಲ್ಲಾಪುರದಲ್ಲಿದೆ. ಅಲ್ಲದೇ ಇಲ್ಲಿಪುರಾತನ ಪಾಂಡುರಂಗ ದೇಗುಲವೂ ಇದ್ದು ಆಷಾಢ ಏಕಾದಶಿ (ಜು.25) ಯಂದು ವಿಶೇಷ ಪೂಜೆ ನಡೆಯಲಿದೆ.

ದೇಗುಲ ವೈಶಿಷ್ಟ್ಯ

ಈ ದೇವಾಲಯದಲ್ಲಿರುವ ಏಕಶಿಲಾ ವಿಗ್ರಹವು ಅತ್ಯಂತ ವಿಶಿಷ್ಟವಾಗಿದೆ. ಒಂದೇ ವಿಗ್ರಹದಲ್ಲಿಭಗವಾನ್ ಹನುಮಂತ, ಭೀಮಸೇನ ಮತ್ತು ಮಧ್ವಾಚಾರ್ಯರ ಮೂರು ರೂಪಗಳನ್ನು ಕಾಣಬಹುದು. ಹಾಗೂ ಪಾದದ ಕೆಳಗೆ ಶನಿ ಪರಮಾತ್ಮ ಇರುವುದು ಈ ದೇವಾಲಯದಲ್ಲಿರುವ ವಿಗ್ರಹದ ವಿಶೇಷ. ಎಲ್ಲಾಪ್ರಾಣದೇವರ ವಿಗ್ರಹಗಳಲ್ಲಿಸಂಜೀವಿನಿ ಪರ್ವತ ಹಿಡಿದಿರುವ ಅಥವಾ ಸೊಂಟದಲ್ಲಿಕೈ ಹಿಡಿದಿರುವ ವಿಗ್ರಹಗಳೇ ಹೆಚ್ಚಾಗಿ ಕಂಡುಬರುತ್ತ¨. ಆದರೆ ಇಲ್ಲಿರುವ ವಿಗ್ರಹವು ಅಭಯ ಹಸ್ತನಾಗಿದ್ದಾನೆ. ಹಸ್ತದ ಮಧ್ಯದಲ್ಲಿಪದ್ಮದ ಚಿತ್ರವಿದ್ದು, ಎಡಗೈಯಲ್ಲಿಸೌಗಂಧಿಕಾ ಪುಷ್ಪ,ಹಿಡಿದುಕೊಂಡಿದ್ದಾನೆ. ಹನುಮ -ಭೀಮ - ಮಧ್ವರ ಪ್ರತೀಕವಾಗಿ ತಲೆಯಲ್ಲಿಶಿಖೆ ಇರುವುದನ್ನು ನೋಡಬಹುದು ಹಾಗೂ 16ಮತ್ತು 17ನೇ ಶತಮಾನದಲ್ಲಿವ್ಯಾಸರಾಜರ ಕಾಲಘಟ್ಟದಲ್ಲಿಪ್ರತಿಷ್ಠೆ ಆಗಿರುವುದಕ್ಕೆ ಬಾಲದಲ್ಲಿಘಂಟೆಯಿದ್ದು ಇದು ವ್ಯಾಸರಾಜ ಪ್ರತಿಷ್ಠಿತ ಎಂಬುದಕ್ಕೆ ಸಾಕ್ಷಿಯಾಗಿದೆ.

ನಿತ್ಯಸೇವೆ

ಪ್ರಾಣ ದೇವರಿಗೆ ವಿಷ್ಣು ಸಹಸ್ರನಾಮ ಹಾಗೂ ಸ್ವಾಮಿಗೆ ಹರಿವಾಯುಸ್ತುತಿ ಪುನಃಶ್ಚರಣದೊಂದಿಗೆ ಮಧು ಅಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಪೂಜೆ ನಿತ್ಯ ನಡೆಯುತ್ತದೆ.

-----------------------------------

ಪಾಂಡುರಂಗ ವಿಠಲ

ಕಲ್ಲಾಪುರದಲ್ಲಿಇರುವ ಮತ್ತೊಂದು ಪ್ರಮುಖ ದೇಗುಲ ಪಾಂಡುರಂಗ ಮೂರ್ತಿ ಚಿಕ್ಕದಾದರೂ ಅತ್ಯಂತ ಲಕ್ಷಣ ಭರಿತವಾಗಿದೆ , ಸಮ ಭಂಗಿಯಲ್ಲಿವಿಗ್ರಹವನ್ನು ರಚಿಸಲಾಗಿದೆ. ಕಟಿಯಲ್ಲಿತೆರೆದಿಟ್ಟಿರುವ ಈ ವಿಗ್ರಹವನ್ನು ಸರ್ವಾಭರಣಗಳಿಂದ ರಚಿಸುವಂತೆ ಕೆತ್ತಲಾಗಿದೆ. ಬಲಭಾಗದಲ್ಲಿರಮಾದೇವಿ ಮತ್ತು ಎಡಭಾಗದಲ್ಲಿರುಕ್ಮಾಯಿ ವಿಗ್ರಹಗಳಿವೆ. ಎರಡು ವಿಗ್ರಹಗಳನ್ನು ಸರ್ವಾಭರಣಗಳಿಂದ ಅಲಂಕರಿಸಲಾಗಿದೆ. ಒಂದೇ ಪಾಣಿಪೀಠ ದಲ್ಲಿಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿರುವುದು ವಿಶೇಷ. ಈ ಕ್ಷೇತ್ರದಲ್ಲಿಆಷಾಢ ಏಕಾದಶಿ ಜುಲೈ 25ರಂದು ವಿಶೇಷ ಪೂಜೆ ನಡೆಯಲಿದೆ. ರಾಘವೇಂದ್ರಾಚಾರ್ ಮತ್ತು ಅವರ ವಂಶಸ್ಥರು ಈ ದೇವಸ್ಥಾನದ ಧಾರ್ಮಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

*ಹತ್ತಿರದಲ್ಲಿ...

- ಧರ್ಮಾ ನದಿ ಮತ್ತು ವರದಾ ನದಿ ದೇವಾಲಯದಿಂದ 5 ಕಿ.ಮೀ. ದೂರದಲ್ಲಹರಿಯುತ್ತದೆ. ಇದು ಸಂಗಮ ಕ್ಷೇತ್ರವೆಂದೇ ಪ್ರಸಿದ್ಧಿ.

- ಉತ್ತರಕುಮಾರನ ವಿರಾಟ್ ನಗರ ಕಲ್ಲಾಪುರದಿಂದ ಕೇವಲ 6ಕಿ.ಮೀ ದೂರದಲ್ಲಿದೆ.

*ಹೋಗುವುದು ಹೇಗೆ?

ಸಾಗರದಿಂದ 103 ಕಿ.ಮೀ.ದೂರದಲ್ಲಈ ದೇಗುಲವಿದೆ. ಹಾನಗಲ್ ಮಾರ್ಗವಾಗಿ ಅಕ್ಕಿಹಾಲೂರು ದಾಟಿ ಕಲ್ಲಾಪುರ ಸರ್ಕಲ್ ಗೆ ಬಂದರೆ ಅಲ್ಲಿಂದ 2ಕಿ.ಮೀ. ಸಾಗರದಿಂದ ಹಾವೇರಿಗೆ ಹೋಗುವ ಬಸ್ಸುಗಳಿವೆ. ಬೆಂಗಳೂರಿಂದ ಹೊರಟು ಹಾವೇರಿ ತಲುಪಿ ಅಲ್ಲಿಂದ ಅಕ್ಕಿ ಹಾಲೂರಕ್ಕೆ ಬಂದರೆ ಅಲ್ಲಿಂದ 2ಕಿ.ಮೀ. ದೂರ.

----------------

ಪೌರಾಣಿಕ ಹಿನ್ನೆಲೆ

ಶ್ರೀ ರಾಮನು ತಮ್ಮ ಲಕ್ಷ್ಮಣ ಯುದ್ಧದ ಸಮಯದಲ್ಲಿಪ್ರಜ್ಞೆ ಕಳೆದುಕೊಂಡಾಗ ಮುಖ್ಯ ಪ್ರಾಣದೇವರಿಗೆ ಸಂಜೀವಿನಿ ಪರ್ವತದಿಂದ ಸಂಜೀವಿನಿ ತರಲು ತಿಳಿಸುತ್ತಾನೆ. ಆಂಜನೇಯ ಸಂಜೀವಿನಿ ತರಲು ಹೊರಟಾಗ ಶನಿ ದೇವರು ಎದುರಾಗಿ ಆಂಜನೇಯನ ಹೆಗಲು ಮೇಲೆ ಕುಳಿತುಕೊಳ್ಳುತ್ತಾನೆ. ಆಂಜನೇಯನು ಸಂಜೀವಿನಿ ಪರ್ವತ ತಲುಪಿದಾಗ ಸಂಜೀವಿನಿ ಕಡ್ಡಿ ಯಾವುದು ಎಂದು ತಿಳಿಯುವುದಿಲ್ಲ. ಕಾರಣ ಶನಿ ದೇವರು ಹೆಗಲ ಮೇಲೆ ಕುಳಿತಿರುತ್ತನೆ. ಆಗ ಇಡೀ ಪರ್ವತವನ್ನು ಹೆಗಲ ಮೇಲೆ ಇಟ್ಟು ಕೊಳ್ಳುತ್ತಾನೆ. ಭಾರ ತಡೆಯಲಾರದೆ ಶನಿ ಪರಮಾತ್ಮನು, ಆಂಜನೇಯನಿಗೆ ತನ್ನನ್ನು ಕೆಳಗೆ ಇಳಿಸುವಂತೆ ಕೇಳಿಕೊಳ್ಳುತ್ತಾನೆ. ‘ನೀನು ನನಗೆ ಕಾಟ ಕೊಡಲು ಬಂದಿರುವುದು, ಕಾಟ ಕೊಡು’ ಎನ್ನುತ್ತಾನೆ. ಅದಕ್ಕೆ ‘ನೀನು ನನ್ನನ್ನು ಕೆಳಗೆ ಇಳಿಸು, ನಿನ್ನ ಭಕ್ತರಿಗೆ ನಾನು ತೊಂದರೆ ಕೊಡುವುದಿಲ್ಲ, ನಿನ್ನ ಪಾದದ ಕೆಳಗೆ ಇರುತ್ತೇನೆ’ ಎಂದು ಶನಿ ಪರಮಾತ್ಮ ಹೇಳುತ್ತಾನೆ. ಹಾಗೆಯೇ ಶ್ರೀ ಕ್ಷೇತ್ರದಲ್ಲಿಮುಖ್ಯ ಪ್ರಾಣದೇವರ ಪಾದದ ಕೆಳಗೆ ಶನಿ ದೇವರು ಇದ್ದಾರೆ ಎನ್ನುತ್ತಾರೆ ಶ್ರೀ ಕ್ಷೇತ್ರದ ಅರ್ಚಕರಾದ ರಾಘವೇಂದ್ರಾಚಾರ್ ಅವರು.